ಕರ್ನಾಟಕ

karnataka

ETV Bharat / state

ರಾಜರಾಜೇಶ್ವರಿ ಬೈ ಎಲೆಕ್ಷನ್‌.. ಅಭ್ಯರ್ಥಿಗಳ ಆಯ್ಕೆ ಆದ್ಮೇಲೇ ಅಖಾಡಕ್ಕೆ ಸಿಕ್ಕುತ್ತೆ ಖದರು!! - ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್​​ ಬಿಜೆಪಿಯ ಬಲ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಉಪಚುನಾವಣೆ ಇದು. ಈ ಕ್ಷೇತ್ರವನ್ನ ಕಾಂಗ್ರೆಸ್ ಮರಳಿ ತನ್ನ ತೆಕ್ಕೆಗೆ ತೆಗೆದುಕೊಂಡ್ರೆ ಪಕ್ಷಕ್ಕೆ ದೊಡ್ಡ ಸಫಲತೆ ಸಿಕ್ಕಂತಾಗಲಿದೆ. ಆದರೆ, ಆಡಳಿತಾರೂಢ ಪಕ್ಷ ಅಷ್ಟು ಬೇಗ ಸೋಲೊಪ್ಪಿಕೊಳ್ಳಲ್ಲ ಅನ್ನೋದು ಕಾಂಗ್ರೆಸ್‌ಗೂ ತಿಳಿದಿದೆ..

Rajarajeshwari nagar by-election
ರಾಜರಾಜೇಶ್ವರಿ ನಗರ ಉಪಚುನಾವಣೆ ರಣಕಣ : ಹೇಗಿದೆ ಗೊತ್ತಾ ಕೈ-ಕಮಲದ ಬಲಾಬಲ

By

Published : Oct 3, 2020, 7:20 PM IST

ಬೆಂಗಳೂರು :ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರದ ಗದ್ದುಗೆಯೇರಲು ಕಾರಣವಾದ ಕ್ಷೇತ್ರಗಳಲ್ಲಿ ರಾಜರಾಜೇಶ್ವರಿನಗರವೂ ಒಂದು. ಕಾಂಗ್ರೆಸ್​​ಗೆ ಕೈಕೊಟ್ಟು ಬಿಜೆಪಿ ಬಲಗೊಳಿಸಿದ್ದ ಮುನಿರತ್ನ ಮತ್ತೆ ಅಖಾಡಕ್ಕಿಳಿದ್ರೆ, ಅವರನ್ನ ಸೋಲಿಸಿ ಕ್ಷೇತ್ರ ಮರಳಿ ಕೈವಶಮಾಡಿಕೊಳ್ಳುವ ಯತ್ನದಲ್ಲಿರುವ ಕಾಂಗ್ರೆಸ್ ನಾಯಕರಿಗೆ ಅದು ಅಷ್ಟು ಸುಲಭವೇ ಅನ್ನೋ ಪ್ರಶ್ನೆಯೂ ಕಾಡ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತೊಮ್ಮೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬೆಂಬಲದೊಂದಿಗೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾಗಿದ್ದರು. ಇದಕ್ಕಾಗಿ ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಜತೆ ಸಮಾಲೋಚಿಸಿ ಅವರ ಪುತ್ರಿ ಹಾಗೂ ಡಿ ಕೆ ರವಿ ಪತ್ನಿ ಕುಸುಮಾ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದರು. ಆದರೆ, ಡಿ ಕೆ ರವಿ ತಾಯಿ ಹಾಕಿದ ಆವಾಜ್ ಮತ್ತು ಸಿದ್ದರಾಮಯ್ಯ ವಿರುದ್ಧ ಮುನಿಸಿಗೆ ಕುಮಾರಸ್ವಾಮಿ ಮೈತ್ರಿಗೆ ಒಪ್ಪಿಲ್ಲ.

ಇದು ಡಿಕೆಶಿ ಅವರಿಗೆ ದೊಡ್ಡ ತಲೆನೋವಾಗಿದೆ ಎನ್ನಲಾಗ್ತಿದೆ. ಒಂದೆಡೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನ ಕಣಕ್ಕಿಳಿಸಿ, ಪರೋಕ್ಷವಾಗಿ ಬಿಜೆಪಿಗೆ ಬೆಂಬಲಿಸುತ್ತಿದೆ ಅನ್ನೋ ಚರ್ಚೆಗಳೂ ನಡೆದಿವೆ. ಇನ್ನೊಂದೆಡೆ ಬಿಜೆಪಿ ಕಡೆಯ ಕ್ಷಣದವರೆಗೂ ತಮ್ಮ ಅಭ್ಯರ್ಥಿ ಮುನಿರತ್ನ ಅವರೋ ಅಥವಾ ತುಳಸಿ ಮುನಿರಾಜು ಗೌಡರೋ ಅನ್ನೋದನ್ನು ಇನ್ನೂ ತಿಳಿಸುತ್ತಿಲ್ಲ.

ಡಿಕೆ ಸೋದರರಿಗೆ ಸವಾಲು :ಮಾಹಿತಿ ಪ್ರಕಾರ ಮುನಿರತ್ನರ ಮನವೊಲಿಸಿ ಅವರನ್ನು ಎಮ್​​ಎಲ್​​​ಸಿ ಮಾಡಿ ಮಂತ್ರಿ ಮಾಡುವ ಭರವಸೆಯನ್ನು ಬಿಜೆಪಿ ನೀಡಿದೆಯಂತೆ. ಆರ್​​​ಎಸ್​​ಎಸ್​​ ನಾಯಕರ ತೀವ್ರ ಒತ್ತಡದ ಹಿನ್ನೆಲೆ ತುಳಸಿ ಮುನಿರಾಜು ಗೌಡರನ್ನು ಅಭ್ಯರ್ಥಿಯಾಗಿಸಲು ಹೊರಟಿದೆ. ಒಂದೊಮ್ಮೆ ಮುನಿರಾಜು ಗೌಡ ಅಭ್ಯರ್ಥಿಯಾದ್ರೆ ಆಗ ಕಾಂಗ್ರೆಸ್​​ಗೆ ಸೇಡಿನ ಪ್ರಶ್ನೆ ಉದ್ಭವಿಸಲ್ಲ. ಸದ್ಯ ರಾಜರಾಜೇಶ್ವರಿನಗರ ವಿಧಾನಸಭೆ ಉಪ ಚುನಾವಣೆ ಗೆಲ್ಲಿಸಿಕೊಳ್ಳುವ ಜವಾಬ್ದಾರಿಯನ್ನು ಡಿ ಕೆ ಸೋದರರು ವಹಿಸಿಕೊಂಡಿದ್ದಾರೆ.

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಉಪಚುನಾವಣೆ ಇದು. ಈ ಕ್ಷೇತ್ರವನ್ನ ಕಾಂಗ್ರೆಸ್ ಮರಳಿ ತನ್ನ ತೆಕ್ಕೆಗೆ ತೆಗೆದುಕೊಂಡ್ರೆ ಪಕ್ಷಕ್ಕೆ ದೊಡ್ಡ ಸಫಲತೆ ಸಿಕ್ಕಂತಾಗಲಿದೆ. ಆದರೆ, ಆಡಳಿತಾರೂಢ ಪಕ್ಷ ಅಷ್ಟು ಬೇಗ ಸೋಲೊಪ್ಪಿಕೊಳ್ಳಲ್ಲ ಅನ್ನೋದು ಕಾಂಗ್ರೆಸ್‌ಗೂ ತಿಳಿದಿದೆ.

ಕಳೆದ ಚುನಾವಣೆ ಅಂಕಿಅಂಶ :ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತುಳಸಿ ಮುನಿರಾಜು ಗೌಡ ವಿರುದ್ಧ ಮುನಿರತ್ನ ಕಾಂಗ್ರೆಸ್​​ನಿಂದ ಗೆದ್ದಿದ್ದರು. 1,08,064 ಮತ ಪಡೆದಿದ್ದ ಮುನಿರತ್ನ ವಿರುದ್ಧ 82,572 ಮತ ಪಡೆದಿದ್ದ ತುಳಸಿ ಮುನಿರಾಜು ಗೌಡ, ಒಟ್ಟು 25,492 ಮತಗಳ ಅಂತರದ ಸೋಲು ಕಂಡಿದ್ದರು. ಆದರೆ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಜಿ ಹೆಚ್ ರಾಮಚಂದ್ರ 60,360 ಮತ ಪಡೆದಿದ್ದರು. ಈ ಸಾರಿ ಜೆಡಿಎಸ್ ಅಭ್ಯರ್ಥಿ ಘೋಷಿಸಿಲ್ಲ. ಮುನಿರತ್ನ ಬಿಜೆಪಿ ಪಾಳಯ ಸೇರಿದ್ದಾರೆ. ಈಗ ಕಾಂಗ್ರೆಸ್‌ನಿಂದ ಯಾರು ಅಭ್ಯರ್ಥಿ ಆಗ್ತಾರೆ ಅನ್ನೋದರ ಮೇಲೆ ರಣಕಣ ರಂಗು ಪಡೆಯಲಿದೆ.

ABOUT THE AUTHOR

...view details