ಕರ್ನಾಟಕ

karnataka

ETV Bharat / state

ಕೋರಮಂಗಲದ ಕ್ರೀಡಾ ಗ್ರಾಮದ ಆವರಣಕ್ಕೆ ಏಕಾಏಕಿ ನುಗ್ಗಿದ ರಾಜಕಾಲುವೆ ನೀರು: Video

ರಾಜಕಾಲುವೆಯಲ್ಲಿ ಜಲಮಂಡಳಿ ಒಳಚರಂಡಿ ನೀರಿನ ಪೈಪ್ ಅಳವಡಿಸಲು ವಾಹನ ಹೋಗಲು ಅನುವಾಗುವಂತೆ ರಾಜಕಾಲುವೆ ಗೋಡೆಯನ್ನು ಒಡೆದು ಹಾಕಿತ್ತು. ಆದರೆ, ಕಾಮಗಾರಿ ಕೆಲಸದ ನಂತರ ಮರಳಿನ ಚೀಲ ಹಾಕದ ಪರಿಣಾಮ ಕಾಲುವೆ ನೀರು ಕ್ರೀಡಾ ಗ್ರಾಮಕ್ಕೆ ನುಗ್ಗಿದೆ ಎನ್ನಲಾಗ್ತಿದೆ.

water logged in  Koramangala sports village
ಕ್ರೀಡಾ ಗ್ರಾಮದ ಆವರಣಕ್ಕೆ ನುಗ್ಗಿದ ರಾಜಕಾಲುವೆ ನೀರು

By

Published : Jul 26, 2021, 6:56 AM IST

ಬೆಂಗಳೂರು: ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದ ಹಿಂಭಾಗ ಜಲಮಂಡಳಿ ಕಳೆದ 2 ತಿಂಗಳ ಹಿಂದೆ ಕಾಮಗಾರಿಯೊಂದಕ್ಕೆ ಸುಮಾರು 15 ಅಡಿ ಉದ್ದದ ರಾಜಕಾಲುವೆ ಗೋಡೆ ಒಡೆದು ಹಾಕಿತ್ತು. ಭಾನುವಾರ ರಾತ್ರಿ ಜೋರಾಗಿ ಮಳೆ ಸುರಿದ ಪರಿಣಾಮ ರಾಜಕಾಲುವೆ ನೀರಿನ ಮಟ್ಟ ಏರಿಕೆಯಾಗಿ ಅಪಾರ್ಟ್​ಮೆಂಟ್ ಆವರಣಕ್ಕೆ 3 ಅಡಿವರೆಗೆ ನೀರು ನುಗ್ಗಿದೆ.

ಪರಿಣಾಮ ಹಲವು ವಾಹನಗಳು ನೀರಿನಲ್ಲಿ ಸಿಲುಕಿದವು. ಏಕಾಏಕಿ ಅಪಾರ್ಟ್​ಮೆಂಟ್ ಆವರಣಕ್ಕೆ ನೀರು ನುಗ್ಗಿದ ಪರಿಣಾಮ ಸ್ಥಳೀಯರು ಭಯ ಭೀತರಾಗಿದ್ದರು. ರಾಜಕಾಲುವೆಯಲ್ಲಿ ಜಲಮಂಡಳಿ ಒಳಚರಂಡಿ ನೀರಿನ ಪೈಪ್ ಅಳವಡಿಸಲು ವಾಹನ ಹೋಗಲು ಅನುವಾಗುವಂತೆ ರಾಜಕಾಲುವೆ ಗೋಡೆಯನ್ನು ಒಡೆದು ಹಾಕಿತ್ತು. ಆದರೆ, ಕಾಮಗಾರಿ ಕೆಲಸದ ನಂತರ ಮರಳಿನ ಚೀಲ ಹಾಕದ ಪರಿಣಾಮ ಕಾಲುವೆ ನೀರು ಕ್ರೀಡಾ ಗ್ರಾಮಕ್ಕೆ ನುಗ್ಗಿದೆ.

ಕ್ರೀಡಾ ಗ್ರಾಮದ ಆವರಣಕ್ಕೆ ನುಗ್ಗಿದ ರಾಜಕಾಲುವೆ ನೀರು

ಮುಂದೆ ಇದೇ ರೀತಿ ಪುನರಾವರ್ತನೆಯಾದರೆ ಎನ್​ಜಿವಿ ಗ್ರಾಮದ ನಿವಾಸಿಗಳು ಸಂಕಷ್ಠಕ್ಕೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಜಲಮಂಡಳಿ ಅಧಿಕಾರಿಗಳು ಹಾಗೂ ಬಿಬಿಎಂಪಿ ಬೃಹತ್ ಅಧಿಕಾರಿಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ರಾಜಧಾನಿಯಲ್ಲಿ ಧಾರಾಕಾರ ಮಳೆಗೆ ಅವಾಂತರ: ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಹೈ ಅಲರ್ಟ್

ABOUT THE AUTHOR

...view details