ಬೆಂಗಳೂರು: ನಗರದ ರಾಜಾಜಿನಗರದ ಆರ್ಟಿಒ ಕಚೇರಿಯ ಅಧಿಕಾರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಸದ್ಯ ಈ ಕಚೇರಿಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ.
ರಾಜಾಜಿನಗರದ ಆರ್ಟಿಒ ಕಚೇರಿ ಸೀಲ್ ಡೌನ್ - ರಾಜಾಜಿನಗರದ ಆರ್ಟಿಒ ಕಚೇರಿ
ರಾಜ್ಯದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಸರ್ಕಾರಿ ಇಲಾಖೆಗಳ ಸಿಬ್ಬಂದಿಯಲ್ಲಿಯೂ ಕೊರೊನಾ ಪತ್ತೆಯಾಗುತ್ತಿದೆ. ರಾಜಾಜಿನಗರದ ಆರ್ಟಿಒ ಕಚೇರಿಯ ಪ್ರಾದೇಶಿಕ ಸಾರಿಗೆ ಇಲಾಖೆ ಆಯುಕ್ತರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮೂರು ದಿನಗಳ ಕಾಲ ಆರ್ಟಿಒ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ರಾಜಾಜಿನಗರದ ಆರ್ಟಿಒ ಕಚೇರಿ

ಸೋಂಕಿತ ಅಧಿಕಾರಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರ ಬಗ್ಗೆ ಬಿಬಿಎಂಪಿ ಮಾಹಿತಿ ಕಲೆಹಾಕುತ್ತಿದ್ದು, ಅಧಿಕಾರಿಯ ಟ್ರಾವೆಲ್ ಹಿಸ್ಟರಿಯನ್ನೂ ಸಹ ಪರಿಶೀಲಿಸಲಾಗುತ್ತಿದೆ.