ಆನೇಕಲ್(ಬೆಂಗಳೂರು): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿರುವ ರಾಜಭವನ ಚಲೋ ಕಾರ್ಯಕ್ರಮಕ್ಕೆ, ಪೊಲೀಸರ ತಡೆ ನಡುವೆಯೂ ರೈತರು ವಾಹನಗಳಲ್ಲಿ ಬೆಂಗಳೂರಿನತ್ತ ಮುಖ ಮಾಡಿದ್ದಾರೆ.
ಈ ಮೂಲಕ ಕಾಂಗ್ರೆಸ್ ನೇತೃತ್ವದಲ್ಲಿ ರೈತರು ಬೀದಿಗಿಳಿದರೆ, ಮೊತ್ತೊಂದೆಡೆ ಆನೇಕಲ್ ಗೋಲ್ಡ್ ಕಾಯಿನ್ ಕ್ಲಬ್ನಲ್ಲಿ ಬಿಜೆಪಿ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ 'ಸಹಲ್' ನಡೆದಿದೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆ, ಈಗಲೇ ಪೂರ್ವ ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಒಂದೆಡೆ ಕಾಂಗ್ರೆಸ್ನ ರಾಜಭವನ ಚಲೋ, ಮತ್ತೊಂದೆಡೆ ಬಿಜೆಪಿಯಿಂದ 'ಸಹಲ್' ಕಳೆದ 19ರ ಬೆಳಗ್ಗೆಯಿಂದ ಇಂದು ಸಂಜೆಯವರೆಗೆ ನಡೆಯುವ ಕಾರ್ಯಕಾರಿಣಿ ಸಭೆಯಲ್ಲಿ, ಗ್ರಾಮ ಮಟ್ಟದಿಂದಲೇ ಕಾರ್ಯಕರ್ತರನ್ನು ತಯಾರಿಗೊಳಿಸಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ತೇಜಸ್ವಿನಿ ಅನಂತ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದು, ಸುಮಾರು 45 ಮಂದಿ ಭಾಗವಹಿಸಿದ್ದಾರೆ.
ಈ ನಡುವೆ ತೀರ್ಮಾನದಂತೆ ಪ್ರತಿಕ್ಷಣ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲಲು ಪರಿಪೂರ್ಣ ಸಿದ್ಧತೆಯಾಗಬೇಕೆಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊನ್ನೆಯಷ್ಟೇ ರಾಜ್ಯಕ್ಕೆ ಆಗಮಿಸಿದ ಅಮಿತ್ ಶಾ ಇಂತಹ, ಆಜ್ಞೆಯನ್ನು ರಾಜ್ಯ ಸಮಿತಿಗೆ ವಹಿಸಿದ್ದಾರೆ ಎನ್ನಲಾಗ್ತಿದೆ.