ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆಯುತ್ತಿದೆ.
ಬೆಂಗಳೂರಿನಲ್ಲಿ ನಾಲ್ಕನೇ ದಿನವೂ ಸುರಿಯುತ್ತಿರುವ ಅಶ್ವಿನಿ ಮಳೆ: ಮುಂದಿನ 3 ದಿನವೂ ಮಳೆ ಸಾಧ್ಯತೆ
ಸದ್ಯ ಕೊರೊನಾ ಬಿಸಿ ಏರಿರುವ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದೆ. ರಾಜ್ಯದಲ್ಲಿ ಏ.26ರ ವರೆಗೆ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜಧಾನಿಯ ಗಾಂಧಿನಗರ, ಮಜೆಸ್ಟಿಕ್, ಮಾಧವನಗರ, ಕುರುಬರಹಳ್ಳಿ, ಯಲಹಂಕ, ಏರ್ಪೋರ್ಟ್ ರಸ್ತೆ , ಸದಾಶಿವನಗರದ, ಯಶವಾಂತಪುರ, ಮಲ್ಲೇಶ್ವರ, ಮಹಾಲಕ್ಷಿ ಲೇಔಟ್ ಸೇರಿದಂತೆ ಧಾರಾಕಾರ ಮಳೆ ಸುರಿಯಿತು. ನಗರದಾದ್ಯಂತ ಸಂಜೆ ಸುಮಾರು ಒಂದು ಗಂಟೆ ಕಾಲ ಧಾರಾಕಾರ ಮಳೆ ಸುರಿದು ತಂಪಾದ ವಾತಾವರಣದ ಅನುಭವ ಸಿಲಿಕಾನ್ ಸಿಟಿ ಜನತೆ ಅನುಭವಿಸುತ್ತಿದ್ದಾರೆ. ಟ್ರಾಫಿಕ್ ಬಿಸಿ ಕೂಡ ಮಳೆಯಿಂದ ಉಂಟಾಗುವ ಸಾಧ್ಯತೆ ಇದ್ದು, ದ್ವಿಚಕ್ರ ವಾಹನ ಸವಾರರು ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ಏ.26ರ ವರೆಗೆ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ತಿಳಿಸಿದೆ.