ಕರ್ನಾಟಕ

karnataka

ETV Bharat / state

ಸಿಲಿಕಾನ್ ಸಿಟಿಯಲ್ಲಿ ಮಳೆ: ಪಟಾಕಿ ಪ್ರಿಯರಿಗೆ ನಿರಾಸೆ - Rain in Banglore

ನಗರದಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇಂದು ಮತ್ತು ನಾಳೆ ಮಳೆಯಾಗಲಿದೆ. ‌ಇದು ಹಿಂಗಾರು ಮಳೆಯಾಗಿದ್ದು, ಇನ್ನೆರೆಡು ದಿನ ಮುಂದುವರೆಯಲಿದೆ.

Rain in Silicon City
ಸಿಲಿಕಾನ್ ಸಿಟಿಯಲ್ಲಿ ಮಳೆ: ಪಟಾಕಿ ಪ್ರಿಯರಿಗೆ ನಿರಾಸೆ

By

Published : Nov 15, 2020, 7:39 PM IST

Updated : Nov 16, 2020, 12:00 AM IST

ಬೆಂಗಳೂರು: ಉದ್ಯಾನನಗರಿಯಲ್ಲಿ ಇಂದು ಸಂಜೆ ಮಳೆಯಾಗಿದ್ದು, ನಗರದ ಮಲ್ಲೇಶ್ವರ, ಮಜೆಸ್ಟಿಕ್, ಕೆ. ಆರ್. ಮಾರುಕಟ್ಟೆ, ಕೆ.ಆರ್​.ಪುರಂ, ಯಶವಂತಪುರ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ.

ಸಿಲಿಕಾನ್ ಸಿಟಿಯಲ್ಲಿ ಮಳೆ: ಪಟಾಕಿ ಪ್ರಿಯರಿಗೆ ನಿರಾಸೆ

ಇತ್ತ ದೀಪಾವಳಿ ಹಬ್ಬ ಆಚರಿಸಿ ಸಂಜೆ ವೇಳೆಗೆ ಪಟಾಕಿ ಹೊಡೆಯಬೇಕೆಂದುಕೊಂಡವರಿಗೆ ನಿರಾಸೆಯಾಗಿದೆ. ಜೊತೆಗೆ ಪಟಾಕಿ ಮಾರಾಟಗಾರಿಗೂ ಬೇಸರವಾಗಿದ್ದು, ಮಳೆಯಿಂದ ಪಟಾಕಿ ವ್ಯಾಪಾರಕ್ಕೂ ಪೆಟ್ಟು ಬಿದ್ದಿದೆ.

ಇನ್ನು ರಜೆ ದಿನಗಳಾಗಿರುವುದರಿಂದ ನಗರದಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ಆದರೆ ಸಾರಕ್ಕಿ ಸುತ್ತಮುತ್ತ ಮಳೆಯಿಂದಾಗಿ ಕೊಂಚ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.

Last Updated : Nov 16, 2020, 12:00 AM IST

For All Latest Updates

ABOUT THE AUTHOR

...view details