ಬೆಂಗಳೂರು: ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟಿಸುತ್ತಿದ್ದಂತೆ ಬೆಂಗಳೂರಲ್ಲೂ ಮುಂಜಾನೆಯಿಂದ ಸಣ್ಣಗೆ ಮಳೆ ಆರಂಭವಾಗಿದೆ.
ಮೋಡ ಬಿತ್ತನೆಯ ಹಿನ್ನೆಲೆ ನಗರದ ಜಿಕೆವಿಕೆ ಆವರಣದಲ್ಲಿ ರಾಡಾರ್ ಅಳವಡಿಸಿರುವುದರಿಂದ ಪ್ರತಿ ಎಂಟು ನಿಮಿಷಕ್ಕೆ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ ನೌಕ್ಯಾಸ್ಟ್ (nowcast) ರಿಪೋರ್ಟ್ ಮಾಹಿತಿ ರವಾನೆಯಾಗಲಿದೆ.
ಈ ರಾಡಾರ್ ಮಾಹಿತಿ ಪ್ರಕಾರ ಬೆಳಗ್ಗೆ ಬೆಂಗಳೂರು ಉತ್ತರ ಭಾಗಕ್ಕೆ ಮೋಡಗಳು ಬಂದಿರುವುದರಿಂದ ಉತ್ತರದಲ್ಲಿ ಮಳೆಯಾಗುತ್ತಿದೆ. ಇಂದು ಇಡೀ ದಿನ ಬೆಂಗಳೂರು ಉತ್ತರ ಭಾಗಗಳಾದ ಯಲಹಂಕ, ಹೆಬ್ಬಾಳ, ಮತ್ತಿಕೆರೆ, ಯಶವಂತಪುರ, ಜಕ್ಕೂರು ಭಾಗಗಳಲ್ಲಿ ಮಳೆಯಾಗಲಿದೆ.
20 ರಿಂದ 25 ಮಿಲಿ ಮೀಟರ್ ಮಳೆಯಾಗಲಿದೆ ಎಂದು ಕೆಎಸ್ಎನ್ಡಿಸಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ. ಅಲ್ಲದೆ ಸಂಪೂರ್ಣ ಬೆಂಗಳೂರಲ್ಲಿ ಮೋಡ, ಗಾಳಿ, ಸಾಧಾರಣ ಮಳೆ ಇರುತ್ತದೆ ಎಂದಿದ್ದಾರೆ.