ಬೆಂಗಳೂರು: ಕಸ್ತೂರಿ ನಗರದ ಡಾಕ್ಟರ್ಸ್ ಲೇಔಟ್ನಲ್ಲಿ ಐದಂತಸ್ತಿನ ಅಪಾರ್ಟ್ಮೆಂಟ್ ಧರೆಗುರುಳಿದ್ದು, ಕಟ್ಟಡ ತೆರವು ಕಾರ್ಯಕ್ಕೆ ಮಳೆ ಅಡ್ಡಿ ಉಂಟುಮಾಡುತ್ತಿದೆ.
ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕಟ್ಟಡ ತೆರವು ಕಾರ್ಯಕ್ಕೆ ಮಳೆ ಅಡ್ಡಿ ಉಂಟುಮಾಡುತ್ತಿದೆ. ನಿನ್ನೆ ರಾತ್ರಿ10:30 ರಿಂದ ತೆರವು ಕಾರ್ಯ ಆರಂಭಿಸಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಕ್ಲೀಯರ್ ಆಗಲಿದೆ. ಈ ಕಟ್ಟಡವು 2014 ರಲ್ಲಿ ನಿರ್ಮಾಣವಾಗಿದ್ದು, ಫಾರುಕ್ ಬೇಗ್ ಎಂಬುವರಿಗೆ ಸೇರಿದ್ದಾಗಿದೆ. ಬಿಲ್ಡಿಂಗ್ನಲ್ಲಿ ಒಟ್ಟು ಮೂರು ಕುಟುಂಬಗಳು ವಾಸಿಸುತ್ತಿದ್ದು, ಕಟ್ಟಡ ವಾಲುತ್ತಿದ್ದಂತೆಯೇ ಎಲ್ಲರೂ ಹೊರಬಂದಿದ್ದಾರೆ. ಎರಡು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು, ಕಾನೂನುಬಾಹಿರವಾಗಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಹಾಗಾಗಿ ಈ ಘಟನೆ ಸಂಭವಿಸಿದೆ ಎಂದರು.