ಬೆಂಗಳೂರು: ಮುಂದಿನ ಮೂರು ಗಂಟೆ ಅವಧಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದ.ಕನ್ನಡ, ಉಡುಪಿ, ಕೊಡಗಿಗೆ ಮಳೆ ಅಲರ್ಟ್ ಕರಾವಳಿ ಜಿಲ್ಲೆಗಳಲ್ಲಿ ಇಂದು ಮಳೆಯಾಗಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಓದಿ: ಸಿದ್ದರಾಮಯ್ಯನವರು ಕುರುಬರಿಗೆ ಮೀಸಲಾತಿ ಕೊಡಿಸುವುದನ್ನು ಬಿಟ್ಟು ಮಂಡಕ್ಕಿ ತಿನ್ನುತ್ತಿದ್ರಾ: ಈಶ್ವರಪ್ಪ
ಚಳಿಗಾಲದಲ್ಲಿ ಪೂರ್ವದಿಂದ ಪಶ್ಚಿಮದೆಡೆಗೆ ಗಾಳಿ ಬೀಸುತ್ತಿರುತ್ತದೆ. ಗಾಳಿ ಜೊತೆಗೆ ಮೋಡವನ್ನೂ ಹೊತ್ತೊಯ್ಯುವುದರಿಂದ ಮಳೆ ಬರುತ್ತದೆ. ಜನವರಿ-ಫೆಬ್ರವರಿ ಅವಧಿಯಲ್ಲಿ ಈ ಮೋಡಗಳು '0' ಅಕ್ಷಾಂಕ್ಷದಿಂದ ಡಿಗ್ರಿಯಿಂದ 10 ಡಿಗ್ರಿ ಅಕ್ಷಾಂಶದಲ್ಲಿ ಚಲಿಸುತ್ತವೆ. ಇದರಿಂದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ.
ಜನವರಿ 5ರಿಂದ 7ರವರೆಗೆ ಕೆಲವು ಕಡೆ ಹಾಗೂ ಜನವರಿ 8ರಂದು ಮಳೆ ಪ್ರಮಾಣ ಏರಿಕೆಯಾಗಲಿದೆ. 9ರಿಂದ ಮಳೆ ಪ್ರಮಾಣ ಕಡಿಮೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಜನವರಿ 5-6ರಂದು ಹಗುರ, 7 ಹಾಗೂ 8ರಂದು ಮಳೆ ಪ್ರಮಾಣ ಹೆಚ್ಚಳವಾಗಲಿದೆ.
ದಕ್ಷಿಣ ಒಳನಾಡಿನಲ್ಲಿ ಜನವರಿ 5ರಿಂದ 7ರವರೆಗೆ ಹಲವು ಕಡೆ ಮಳೆಯಾಗುವ ಸಾಧ್ಯತೆ ಇದ್ದು, 8-9ರಂದು ಕೆಲವು ಕಡೆ ಮಾತ್ರ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮಂಗಳವಾರ ಮತ್ತು ಬುಧವಾರ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ ಎಂದು ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.