ಬೆಂಗಳೂರು :ಕುಪ್ಪಂ ರೈಲ್ವೆ ನಿಲ್ದಾಣದ ಯಾರ್ಡ್ನಲ್ಲಿ ಅಸ್ತಿತ್ವದಲ್ಲಿರುವ ಫುಟ್ ಓವರ್ ಬ್ರಿಡ್ಜ್‌ನ ಬದಲಾಗಿ ಹೊಸ ಫುಟ್ ಓವರ್ ಬ್ರಿಡ್ಜ್ ಅಳವಡಿಕೆ ಕಾರ್ಯ ನಿಮಿತ್ತ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಇರುವ ಕಾರಣ ರೈಲುಗಳ ಸೇವೆ ಭಾಗಶಃ ರದ್ದು ಆಗಲಿದೆ. ಹಾಗೆ ಕೆಲ ರೈಲುಗಳ ಓಡಾಟದಲ್ಲಿ ಬದಲಾವಣೆ ಆಗಲಿದೆ. ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ರೈಲು ಸೇವೆಯ ಭಾಗಶಃ ರದ್ದತಿ:
1.ನವೆಂಬರ್ 30 ರಿಂದ ಡಿ.2ರವರೆಗೆ ರೈಲು ಸಂಖ್ಯೆ (06551) ಕೆಎಸ್ಆರ್ ಬೆಂಗಳೂರು - ಜೋಲಾರಪೇಟೆ ವಿಶೇಷ ಮೆಮು ಸೇವೆಯು ಬಂಗಾರಪೇಟೆ ಹಾಗೂ ಜೋಲಾರಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
2.ನವೆಂಬರ್ 30 ರಿಂದ ಡಿ.2ರವರೆಗೆ ರೈಲು ಸಂಖ್ಯೆ(06552) ಜೋಲಾರಪೇಟೆ - ಕೆಎಸ್ಆರ್ ಬೆಂಗಳೂರು ವಿಶೇಷ ಮೆಮು ಸೇವೆ ಜೋಲಾರಪೇಟೆ ಹಾಗೂ ಬಂಗಾರಪೇಟೆಗಳ ನಡುವೆ ಭಾಗಶಃ ರದ್ದಾಗುವುದು. ರೈಲು ಈ ದಿನಗಳಲ್ಲಿ ಬಂಗಾರಪೇಟೆಯಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣದೆಡೆಗೆ ಹೊರಡುವುದು.
ರೈಲುಗಳ ನಿಯಂತ್ರಣ :
1.ರೈಲು ಸಂಖ್ಯೆ (22497) ಶ್ರೀಗಂಗಾನಗರ - ತಿರುಚಿನಾಪಳ್ಳಿ ಹಮ್ ಸಫರ್ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಇಂದು (ನ.29) ರಂದು ಟ್ಯಾಕಲ್ ನಿಲ್ದಾಣದಲ್ಲಿ 30 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.
2.ರೈಲು ಸಂಖ್ಯೆ(12577) ದರ್ಭಾಂಗ ಮೈಸೂರು ಭಾಗಮತಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು ನವೆಂಬರ್ 30ರಂದು ಮಲ್ಲನೂರು ನಿಲ್ದಾಣದಲ್ಲಿ 80 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.
3.ರೈಲು ಸಂಖ್ಯೆ (22626) ಕೆಎಸ್ಆರ್ ಬೆಂಗಳೂರು- ಎಂಜಿಆರ್ ಚೆನ್ನೈ ಸೆಂಟ್ರಲ್ ಡಬಲ್ ಡೆಕ್ಕರ್ ಎಕ್ಸ್ಪ್ರೆಸ್ ರೈಲನ್ನು ನ.30 ಮತ್ತು ಡಿ.2ರಂದು ಬಿಸನಟ್ಟಮ್ ನಿಲ್ದಾಣದಲ್ಲಿ 30 ನಿಮಿಷಗಳ ಅವಧಿಗೆ ಹಾಗೂ ಡಿ.1ರಂದು ವರದಪುರ ನಿಲ್ದಾಣದಲ್ಲಿ 40 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.
4. ರೈಲು ಸಂಖ್ಯೆ(12640) ಕೆಎಸ್ಆರ್ ಬೆಂಗಳೂರು - ಎಂಜಿಆರ್ ಚೆನ್ನೈ ಸೆಂಟ್ರಲ್ ಬೃಂದಾವನ್ ಎಕ್ಸ್ಪ್ರೆಸ್ ರೈಲನ್ನು ನ.30 ರಿಂದ ಡಿ.2ರವರೆಗೆ ಬಂಗಾರಪೇಟೆ ನಿಲ್ದಾಣದಲ್ಲಿ 30 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.
5. ಡಿಸೆಂಬರ್ 1ರಂದು ರೈಲು ಸಂಖ್ಯೆ(12539) ಯಶವಂತಪುರ-ಲಖನೌ ಎಕ್ಸ್ಪ್ರೆಸ್ ರೈಲನ್ನು ಬಿಸನಟ್ಟಮ್ ನಿಲ್ದಾಣದಲ್ಲಿ 75 ನಿಮಿಷಗಳ ಅವಧಿಗೆ ನಿಯಂತ್ರಿಸಲಾಗುವುದು.
ಇದನ್ನೂ ಓದಿ: ಪರಿಷತ್ ಸದಸ್ಯತ್ವಕ್ಕೆ ಜೆಡಿಎಸ್ ಸದಸ್ಯ ಸಿ.ಆರ್.ಮನೋಹರ್ ರಾಜೀನಾಮೆ