ಬೆಂಗಳೂರು :ಕೊರೊನಾ ಲಾಕ್ಡೌನ್ನಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ರೈಲು ಸಂಚಾರವೇ ಬಂದ್ ಆಗಿತ್ತು. ಇದೀಗ ಒಂದೂವರೆ ತಿಂಗಳ ನಂತರ ರೈಲು ಸಂಚಾರಕ್ಕೆ ಕೇಂದ್ರ ಗ್ರೀನ್ ಸಿಗ್ನಲ್ ನೀಡಿದೆ.
ನಾಳೆಯಿಂದ ರೈಲು ಓಡಾಟ ಆರಂಭ.. ಪ್ಲಾಟ್‌ಫಾರ್ಮ್ ಸ್ವಚ್ಛಗೊಳಿಸಿದ ಸಿಬ್ಬಂದಿ.. - ರೈಲು ಪ್ಲಾಟ್ ಫಾರ್ಮ್ ಸ್ವಚ್ಛಗೊಳಿಸಿದ ಸಿಬ್ಬಂದಿ
ಆಯ್ದ 12 ನಗರಗಳಿಗೆ ರೈಲ್ವೆ ಸಂಚಾರ ಆರಂಭವಾಗುತ್ತಿದೆ. ದೆಹಲಿಯಿಂದ ಬೆಂಗಳೂರಿಗೆ ರೈಲು ಬರಲಿದೆ. ಇಂದು ಸಂಜೆ 4 ಗಂಟೆ ನಂತರ ಐಆರ್‌ಸಿಟಿಸಿ ವೆಬ್ಸೈಟ್ ಮೂಲಕ ಮುಂಗಡ ಕಾಯ್ದಿರಿಸಿದವರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
![ನಾಳೆಯಿಂದ ರೈಲು ಓಡಾಟ ಆರಂಭ.. ಪ್ಲಾಟ್‌ಫಾರ್ಮ್ ಸ್ವಚ್ಛಗೊಳಿಸಿದ ಸಿಬ್ಬಂದಿ.. railway station cleaning in bengaluru](https://etvbharatimages.akamaized.net/etvbharat/prod-images/768-512-7148805-thumbnail-3x2-train.jpg)
ರೈಲು ನಿಲ್ದಾಣ ಕ್ಲೀನಿಂಗ್
ಇಲಾಖೆಯ ಸಿಬ್ಬಂದಿಯಿಂದ ರೈಲು ನಿಲ್ದಾಣ ಕ್ಲೀನಿಂಗ್..
ನಾಳೆಯಿಂದ ರೈಲ್ವೆ ಸೇವೆ ಆರಂಭ ಹಿನ್ನೆಲೆ ನೈರುತ್ಯ ರೈಲ್ವೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆಯ್ದ 12 ನಗರಗಳಿಗೆ ರೈಲ್ವೆ ಸಂಚಾರ ಆರಂಭವಾಗುತ್ತಿದೆ. ದೆಹಲಿಯಿಂದ ಬೆಂಗಳೂರಿಗೆ ರೈಲು ಬರಲಿದೆ. ಇಂದು ಸಂಜೆ 4 ಗಂಟೆ ನಂತರ ಐಆರ್‌ಸಿಟಿಸಿ ವೆಬ್ಸೈಟ್ ಮೂಲಕ ಮುಂಗಡ ಕಾಯ್ದಿರಿಸಿದವರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ರೈಲು ಬರುವ ಮುನ್ನ ರೈಲ್ವೆ ಇಲಾಖೆ ಮುನ್ನೆಚ್ಚರಿಕಾ ಕ್ರಮಕೈಗೊಂಡಿದೆ. ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರೈಲ್ವೆ ಪ್ಲಾಟ್ಫಾರ್ಮ್ಗಳನ್ನ ಶುಚಿಗೊಳಿಸುವ ಕಾರ್ಯ ಭರದಿಂದ ಸಾಗಿದೆ.