ಬೆಂಗಳೂರು: ಕೊರೊನಾ ಹಿನ್ನೆಲೆ ರೈಲ್ವೆ ನಿಲ್ದಾಣದಲ್ಲಿ ಅನಗತ್ಯ ಓಡಾಟ ತಪ್ಪಿಸುವ ಹಿನ್ನೆಲೆ ಫ್ಲಾಟ್ ಫಾರ್ಮ್ ಟಿಕೆಟ್ ದರ ಏರಿಕೆ ಮಾಡಲಾಗಿದೆ. ಇನ್ನು ಈ ನಿಯಮವನ್ನು ಡಿಸೆಂಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ.
ರೈಲ್ವೆ ಫ್ಲಾಟ್ಫಾರ್ಮ್ ಟಿಕೆಟ್ ತಾತ್ಕಾಲಿಕ ದರ ಏರಿಕೆ ಮತ್ತೊಂದು ತಿಂಗಳು ವಿಸ್ತರಣೆ - Bengaluru railway station News
ರೈಲ್ವೆ ನಿಲ್ದಾಣದಲ್ಲಿ ಅನಗತ್ಯ ಓಡಾಟವನ್ನ ತಪ್ಪಿಸುವ ಹಿನ್ನೆಲೆಯಲ್ಲಿ ಫ್ಲಾಟ್ ಫಾರ್ಮ್ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಇದೀಗ ಈ ಆದೇಶ ಡಿಸೆಂಬರ್ 31ರವರೆಗೆ ವಿಸ್ತರಣೆಯಾಗಲಿದೆ.
ಫ್ಲಾಟ್ ಫಾರ್ಮ್ ಟಿಕೆಟ್ ದರವನ್ನು 10 ರೂ.ನಿಂದ 50 ರೂ.ಗೆ ಹೆಚ್ಚಿಸಲಾಗಿದೆ. ನವೆಂಬರ್ 31ರವರೆಗೆ ಇದ್ದ ಈ ದರವನ್ನು ಮತ್ತೊಂದು ತಿಂಗಳು ವಿಸ್ತರಣೆ ಮಾಡಲಾಗಿದೆ. ಈ ದರ ಏರಿಕೆ ತಾತ್ಕಾಲಿಕವಾಗಿ ಇರಲಿದ್ದು, ಮುಂದಿನ ಆದೇಶದವರೆಗೆ ಮುಂದುವರೆಯಲಿದೆ. ಡಿಸೆಂಬರ್ 31ರವರೆಗೆ ಹೊಸ ಆದೇಶ ಜಾರಿಯಲ್ಲಿ ಇರಲಿದೆ.
ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಶವಂತಪುರ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಕೃಷ್ಣರಾಜಪುರಂ, ಬಂಗಾರಪೇಟೆ, ತುಮಕೂರು, ಹೊಸೂರು ಕೆಂಗೇರಿ, ಮಂಡ್ಯ, ಬಾಣಸವಾಡಿ, ಕಾರ್ಮೆಲರಂ, ವೈಟ್ಫೀಲ್ಡ್ ರೈಲ್ವೆ ನಿಲ್ದಾಣದಲ್ಲಿ ಫ್ಲಾಟ್ ಫಾರ್ಮ್ ಟಿಕೆಟ್ 50 ರೂಪಾಯಿಯಿ ಇರಲಿದೆ.