ಕರ್ನಾಟಕ

karnataka

ETV Bharat / state

ದೂರದ ಊರಿಗೆ ರೈಲಿನಲ್ಲಿ ಹೋಗುವವರಿಗೆ ಆಹಾರ ಪೂರೈಕೆ ಹೇಗಿದೆ ಗೊತ್ತಾ? - ಶ್ರಮಿಕ್​ ರೈಲು

ಶ್ರಮಿಕ್​ ರೈಲಿನಲ್ಲಿ ದೂರುದ ಊರುಗಳಿಗೆ ಪ್ರಯಾಣ ಬೆಳೆಸುತ್ತಿರುವ ವಲಸೆ ಕಾರ್ಮಿಕರಿಗೆ ರೈಲಿನಲ್ಲಿ ಆಹಾರ ಪೂರೈಕೆ ಹೇಗಿದೆ ಅನ್ನೋದರ ಮಾಹಿತಿ ಇಲ್ಲಿದೆ.

Shramik train
ವಲಸೆ ಕಾರ್ಮಿಕರು

By

Published : May 10, 2020, 12:29 AM IST

ಬೆಂಗಳೂರು:ಹೊಟ್ಟೆಪಾಡಿಗಾಗಿ ಬೆಂಗಳೂರು ಬಾಗಿಲು ತಟ್ಟವವರು ಲಕ್ಷಾಂತರ ಮಂದಿ ಇದ್ದಾರೆ. ಹೊರ ರಾಜ್ಯಗಳಾದ ಬಿಹಾರ, ಯುಪಿ, ರಾಜಸ್ಥಾನ, ಜಾರ್ಖಂಡ್ ಹೀಗೆ ಹತ್ತಾರು ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬರುತ್ತಾರೆ. ಹೀಗೆ ಬಂದವರಿಗೆ ಶಾಕ್ ಕೊಟ್ಟಿದ್ದೇ ಕೊರೊನಾ‌ ವೈರಸ್. ಹೌದು, ಹುಟ್ಟಿದ ಊರು ಬಿಟ್ಟು ಉದ್ಯೋಗ ಹುಡುಕಿಕೊಂಡು ಬಂದವರು ಕೊರೊನಾ-ಲಾಕ್​ಡೌನ್ ನಡುವೆ ಸಿಲುಕಿ ಒದ್ದಾಡಿದರು. ನಮ್ಮೂರಿಗೆ ನಮ್ಮನ್ನ ಕಳುಹಿಸಿಕೊಡಿ ಅಂತ ಸರ್ಕಾರಕ್ಕೆ ಮನವಿ ಮಾಡಿದರು.

ಊರುಗಳಿಗೆ ಹೊರಟಿರುವ ವಲಸೆ ಕಾರ್ಮಿಕರು

ಹೀಗಾಗಿಯೇ ರಾಜ್ಯ ಸರ್ಕಾರ ದೂರದ ಊರಿಗಳಿಗೆ ರೈಲು ವ್ಯವಸ್ಥೆ ಮಾಡಿತ್ತು. ಹಾಗಿದ್ದರೆ ದೂರದ ಊರಿಗೆ ರೈಲಿನಲ್ಲಿ ಹೋಗುವವರಿಗೆ ಆಹಾರ ಪೂರೈಕೆ ಹೇಗಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. ಶನಿವಾರ ಕೂಡ ವಲಸೆ ಕಾರ್ಮಿಕರಿಗಾಗಿ ಮೂರು ವಿಶೇಷ ರೈಲು‌ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 3,598 ಪ್ರಯಾಣಿಕರು ಒರಿಸ್ಸಾ ಮತ್ತು ಲಾಖನೌಗೆ ತೆರಳಿದರು.

ಇನ್ನು ಇವರಿಗೆ ರೈಲ್ವೆ ಇಲಾಖೆಯು ಬಿಸಿಯಾದ ಆಹಾರ, 8 ಚಪಾತಿ ಜೊತೆಗೆ ಉಪ್ಪಿನಕಾಯಿ, 2 ಬಿಸ್ಕೆಟ್​ ಪ್ಯಾಕೇಟ್, 2 ನೀರಿನ‌ ಬಾಟೆಲ್ ಹಾಗೂ ಮಜ್ಜಿಗೆ ಪ್ಯಾಕೇಟ್ ನೀಡಿದೆ. ಇನ್ನು ಅಭುದ್ಯ ಎಂಬ ಎನ್​ಜಿಒ ಸಂಸ್ಥೆ ವಲಸೆ ಪ್ರಯಾಣಿಕರಿಗಾಗಿ ಬಿಸ್ಕತ್​ ಪ್ಯಾಕೇಟ್ ನೀಡಿದೆ.

ABOUT THE AUTHOR

...view details