ಬೆಂಗಳೂರು :ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಇದೀಗ 1326 ಟನ್ ಅಕ್ಕಿಯನ್ನು ಕ್ಯಾತ್ಸಂದ್ರ ಗೂಡ್ಸ್ ಟರ್ಮಿನಲ್ ಡಿಪೋದಿಂದ ತ್ರಿಪುರಾ ರಾಜ್ಯದ ಜಿರಾನಿಯಾಗೆ ಗೂಡ್ಸ್ ರೈಲಿನ ಮೂಲಕ ಕಳುಹಿಸಿದೆ.
ಬೆಂಗಳೂರು ವಿಭಾಗ ಲೋಡ್ ಮಾಡಿದ ಮೊದಲ ಆಹಾರ ಧಾನ್ಯ ಸಾಗಣೆ ಇದಾಗಿದೆ. ರೈಲ್ವೆ ಸರಕು ಸಾಗಣೆದಾರರಾದ ಓಂಕಾರೇಶ್ವರ ರೈಸ್ ಮಿಲ್ಸ್ ತುಮಕೂರು ಇವರಿಂದ ರೂ. 44,74, 667 ಸಂಗ್ರಹಿಸಿದೆ.
ಈ ವಿಭಾಗವು ತನ್ನ ಸರಕು ಮಾರಾಟದ ಉಪಕ್ರಮದೊಂದಿಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಸರಕುಗಳ ಮಾರುಕಟ್ಟೆಯನ್ನು ಪಡೆದುಕೊಳ್ಳುವ ನಿರೀಕ್ಷೆಯನ್ನ ಹೊಂದಿದೆ.
ಈ ಉಪಕ್ರಮ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಹೊಸ ಮಾರುಕಟ್ಟೆಗಳಿಗೆ ಸಂಪರ್ಕಿಸಲು ಮತ್ತು ದೇಶದ ಈಶಾನ್ಯ ಭಾಗಗಳಿಗೆ ಆಹಾರ ಧಾನ್ಯಗಳನ್ನು ಸಾಗಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ಓದಿ:ಬಿಟ್ಟೇನೆಂದ್ರೂ ಬಿಡದು ಈ 'ಗೃಹ'ವ್ಯಾದಿ.. ಇಷ್ಟದ ಮನೆಗಾಗಿ ಸಚಿವರುಗಳಿಂದ ಸಿಎಂಗೆ ದುಂಬಾಲು..