ಬೆಂಗಳೂರು:ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದರೆ ಅದೇನೋ ಒಂದು ರೀತಿಯ ಧೈರ್ಯ, ಸಂತಸ. ಹೀಗಾಗಿಯೇ ಜನರಲ್ಲಿ ದೇಶಭಕ್ತಿ ಹೆಚ್ಚಿಸಲು ಮತ್ತು ಪ್ರೇರೆಪಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.
ಪ್ರಯಾಣಿಕರಲ್ಲಿ ದೇಶಭಕ್ತಿ ಹೆಚ್ಚಿಸಲು ಮುಂದಾದ ಭಾರತೀಯ ರೈಲ್ವೆ ಇಲಾಖೆ - ವೈಭವ ಪ್ರೇರಿತ ಧ್ವಜಗಳ ನಿರ್ಮಾಣ
ಜನರಲ್ಲಿ ದೇಶಭಕ್ತಿ ಹೆಚ್ಚಿಸಲು ಮತ್ತು ಪ್ರೇರೆಪಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ಬೆಂಗಳೂರು ಸಿಟಿ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ ರಾಷ್ಟ್ರಧ್ವಜಗಳನ್ನು ಅಳವಡಿಸಲಾಗಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ಬೆಂಗಳೂರು ಸಿಟಿ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ 100 ಅಡಿ ಉದ್ದದ ಸ್ತಂಭಗಳಲ್ಲಿ ಧ್ವಜಗಳನ್ನು ಅಳವಡಿಸಲಾಗಿದೆ. ಭಾರತೀಯ ರೈಲ್ವೆಯಲ್ಲಿ ಇಂತಹ ಧ್ವಜಗಳನ್ನು ಅಳವಡಿಸಲು 75 ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಎರಡು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳು ಸೇರಿವೆ.
ಧ್ವಜವನ್ನೊಳಗೊಂಡು ಕಂಬದ ಎತ್ತರ 100 ಅಡಿಗಳಾಗಿದ್ದು, ಇದನ್ನು ವೈಭವಪ್ರೇರಿತ ಧ್ವಜ ಎಂದು ಕರೆಯಲಾಗುತ್ತೆ. ಧ್ವಜವು 8 ಮೀಟರ್ ಎತ್ತರ ಹಾಗೂ 12 ಮೀಟರ್ ಉದ್ದವಾಗಿದೆ. ಅಳವಡಿಕೆಯ ಅಂದಾಜು ವೆಚ್ಚವು ಪ್ರತಿಯೊಂದಕ್ಕೆ ಸುಮಾರು 10 ಲಕ್ಷ ರೂಪಾಯಿ ತಗುಲಿದೆ. ಈ ಧ್ವಜಗಳನ್ನು ಪ್ರಯಾಣಿಕರ ಆಗಮನ ಹಾಗೂ ನಿಗರ್ಮನದ ಸ್ಥಳಗಳಲ್ಲಿ ಅಳವಡಿಸಲಾಗಿದೆ.