ಬೆಂಗಳೂರು:ನಾಳೆ ರಾಜ್ಯಾದ್ಯಂತ ರೈಲು ಸೇವೆ ಬಂದ್ ಆಗುವ ಲಕ್ಷಣಗಳಿದ್ದು, ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ರೈತರ ಆಕ್ರೋಶ ಬುಗಿಲೇಳುವ ಸಾಧ್ಯತೆಯಿದೆ.
ರಾಜ್ಯ ಐಕ್ಯ ಹೋರಾಟ ಸಮಿತಿ ರೈಲು ತಡೆ ಚಳವಳಿಗೆ ಕರೆ ನೀಡಿದ್ದು, ನಾಳೆ ರಾಜ್ಯಾದ್ಯಂತ 3 ಗಂಟೆಗಳ ಕಾಲ ಚಳವಳಿ ನಡೆಯಲಿದೆ ಎನ್ನಲಾಗುತ್ತಿದೆ.

ದೆಹಲಿ ರೈತರ ಹೋರಾಟವನ್ನು ಬೆಂಬಲಿಸಿ ರಾಜ್ಯಾದ್ಯಂತ ಮಧ್ಯಾಹ್ನ 12 ರಿಂದ 3ಗಂಟೆವರೆಗೆ ರೈಲು ತಡೆ ಚಳವಳಿ ನಡೆಯಲಿದ್ದು,ಕೃಷಿ ಕಾಯ್ದೆ ವಿರೋಧಿಸಿ ಹಾಗೂ ದೆಹಲಿ ರೈತ ಹೋರಾಟ ಬೆಂಬಲಿಸಿ ರೈಲು ತಡೆ ಚಳವಳಿ ನಡೆಸಲಾಗುವುದು. ಇದರ ಜೊತೆಗೆ ಕೇಂದ್ರ ಸರ್ಕಾರ ರೈತ ಚಳವಳಿಯನ್ನು ಹತ್ತಿಕ್ಕಿರೋದಕ್ಕೆ ವಿರೋಧ ಪಡಿಸುತ್ತೇವೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಈ ಸಮಯದಲ್ಲಿ ರೈಲು ಸೇವೆ ಬಂದ್ ಆಗಲಿದೆಯಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.