ಕರ್ನಾಟಕ

karnataka

By

Published : Aug 1, 2019, 12:52 PM IST

ETV Bharat / state

ಡಿಕೆಶಿ ಮನೆ ಮೇಲಿನ ಐಟಿ ದಾಳಿಯೇ ಕಾಫಿ ದೊರೆಯ ಸಂಕಷ್ಟಕ್ಕೆ ಕಾರಣವಾಯ್ತೇ..?

ಡಿ.ಕೆ.ಶಿವಕುಮಾರ್ ಜೊತೆ ವಿ.ಜಿ.ಸಿದ್ಧಾರ್ಥ್​ ಆರ್ಥಿಕ ವ್ಯವಹಾರ ಹೊಂದಿದ್ದರು. ಹೀಗಾಗಿ ಐಟಿ ಅಧಿಕಾರಿಗಳು ಕಾಫಿ ದೊರೆ ಬೆನ್ನು ಬಿದ್ದಿದ್ದರು ಎಂದು ಹೇಳಲಾಗುತ್ತಿದೆ.

ಡಿ.ಕೆ.ಶಿವಕುಮಾರ್, ವಿ.ಜಿ.ಸಿದ್ಧಾರ್ಥ್

ಬೆಂಗಳೂರು:ಮಾಜಿ ಸಚಿವಡಿ.ಕೆ.ಶಿವಕುಮಾರ್​ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ ನಡೆಸಿದಾಗಿನಿಂದ ವಿ.ಜಿ.ಸಿದ್ಧಾರ್ಥ್​ಗೆ ಸಂಕಷ್ಟಗಳು ಶುರುವಾದವು ಎಂಬ ಮಾತು ಬೆಂಗಳೂರಿನ ಉದ್ಯಮಿ ಮತ್ತು ರಾಜಕಾರಣಿಗಳ ವಲಯದಲ್ಲಿ ಕೇಳಿಬರುತ್ತಿದೆ.

ತೆರಿಗೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಸಿದ್ಧಾರ್ಥ್​ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಆರ್ಥಿಕ ವ್ಯವಹಾರವಿತ್ತು ಎಂದು ಹೇಳಲಾಗುತ್ತಿದೆ. 2017 ಆಗಸ್ಟ್​ 2 ರಂದು ಡಿಕೆಶಿ ಮತ್ತು ಅವರ ಆರ್ಥಿಕ ಸಲಹೆಗಾರ ಚಂದ್ರಶೇಖರ್​ ಸುಕಪುರಿ ಮನೆ ಮೇಲೆ ದಾಳಿ ನಡೆಸಿ, ದಾಖಲೆಗಳನ್ನ ಪರಿಶೀಲನೆ ನಡೆಸಿದಾಗ ಕೆಫೆ ಕಾಫಿ ಡೇ ಲಿಮಿಟೆಡ್ ಮತ್ತು ಎಂ ಸೋಲ್ ಸ್ಪೇಸ್‌ ನೊಂದಿಗೆ ಹಣಕಾಸಿನ ವಹಿವಾಟು ಇರುವುದು ಬೆಳಕಿಗೆ ಬಂದಿದೆ.

ಇದೇ ಮಾಹಿತಿಯನ್ನ ಆಧರಿಸಿ ಐಟಿ ಅಧಿಕಾರಿಗಳು ಸಿದ್ಧಾರ್ಥ್​ ಬೆನ್ನಿಗೆ ಬೀಳುತ್ತಾರೆ. ಹೀಗಾಗಿ ಸಾವಿಗೆ ಮುನ್ನ ಸಿದ್ಧಾರ್ಥ​ ಬರೆದ ಪತ್ರದಲ್ಲಿ ಐಟಿ ಡಿಜಿ ತುಂಬಾ ಕಿರುಕುಳ ನೀಡುತ್ತಿದ್ದಾರೆ ಎಂದು ಉಲ್ಲೇಖಿಸಿರುತ್ತಾರೆ. ಈ ಬಗ್ಗೆ ಮಾತನಾಡಿದ್ದ ಐಟಿ ಡಿಜಿ ಪಿ.ಆರ್.ಬಾಲಕೃಷ್ಣನ್ ನಮಗೆ ಸಿಕ್ಕ ದಾಖಲೆಗಳ ಆಧಾರದ ಮೇಲೆ ತನಿಖೆ ನಡೆಸುವುದು ಸಹಜ. ಅದೇ ರೀತಿ ಸಿದ್ಧಾರ್ಥ್ ಪ್ರಕರಣದಲ್ಲಿ ತನಿಖೆ ನಡೆಸಿದ್ದೆವು ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎಂದಿದ್ದರು.

ಮೈಂಡ್ ಟ್ರೀ ಕಂಪನಿಯಲ್ಲಿ ಸಿದ್ಧಾರ್ಥ್​ ಹೊಂದಿದ್ದ ಷೇರುಗಳನ್ನ ಐಟಿ ಇಲಾಖೆ ವಶಪಡಿಸಿಕೊಂಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಐಟಿ ಇಲಾಖೆ ಮೈಂಡ್ ಟ್ರೀ ಕಂಪನಿ ಷೇರ್​ ಡೀಲ್​​ನಲ್ಲಿ ಸಿದ್ಧಾರ್ಥ್​​ ಅವರಿಗೆ ತೊಂದರೆ ಕೊಟ್ಟಿಲ್ಲ. ಅವರ ಮನವಿಯಂತೆ ಷೇರು ರಿಲೀಸ್ ಮಾಡಿದ್ವಿ, ಆ ನಂತರ ಸಿದ್ದಾರ್ಥ್​ ತಮ್ಮಿಚ್ಚೆ ಯಂತೆ ಷೇರು ಮಾರಾಟ ಮಾಡಿದ್ದಾರೆ ಎಂದಿದೆ.

ಒಟ್ಟಾರೆಯಾಗಿ ಡಿಕೆಶಿ ಮೇಲೆ ಐಟಿ ದಾಳಿ ನಡೆದ ನಂತರದಿಂದ ಕಾಫಿ ದೊರೆಗೆ ಸಂಕಷ್ಟ ಶುರುವಾಗಿದ್ದು ಎಂಬುದು ಈಗ ಚರ್ಚಿತ ವಿಷಯವಾಗಿದೆ.

ABOUT THE AUTHOR

...view details