ಕರ್ನಾಟಕ

karnataka

ETV Bharat / state

ಸೋಂಕಿತರ ಕುಟುಂಬಸ್ಥರಿಂದ ಲಕ್ಷಾಂತರ ರೂ.ವಸೂಲಿ ಆರೋಪ: ಖಾಸಗಿ ಆಸ್ಪತ್ರೆ ಮೇಲೆ‌ ದಾಳಿ - IPS officer alok kumar raids private hospital

ಸೋಂಕಿತರ ಕುಟುಂಬಸ್ಥರಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ ಆರೋಪ ಹಿನ್ನೆಲೆ ಐಪಿಎಸ್ ಅಧಿಕಾರಿ ಅಲೋಕ್‌ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಅಲೋಕ್‌ ಕುಮಾರ್
ಅಲೋಕ್‌ ಕುಮಾರ್

By

Published : Jun 2, 2021, 6:31 PM IST

Updated : Jun 2, 2021, 7:36 PM IST

ಬೆಂಗಳೂರು: ಕೊರೊನಾ ಸೋಂಕಿತರಿಂದ ಖಾಸಗಿ ಆಸ್ಪತ್ರೆಯು ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ನಗರದ ಪೂರ್ವ ವಿಭಾಗದ ಖಾಸಗಿ ಆಸ್ಪತ್ರೆಗಳ ಮೇಲೆ ಕೋವಿಡ್​ ಉಸ್ತುವಾರಿ ನೇತೃತ್ವದ ತಂಡ ದಾಳಿ ಮಾಡಿ ಬಿಸಿ ಮುಟ್ಟಿಸಿದೆ.

ಐಪಿಎಸ್ ಅಧಿಕಾರಿ ಅಲೋಕ್‌ ಕುಮಾರ್ ಹಾಗೂ‌ ಐಎಎಸ್ ಅಧಿಕಾರಿ ಮಣಿವಣ್ಣನ್ ನೇತೃತ್ವದ ಅಧಿಕಾರಿಗಳ ತಂಡ ಇಂದು ಕಗ್ಗದಾಸಪುರದ ಕಂಫರ್ಟ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಮೇಲೆ ದಾಳಿ ನಡೆಸಿದೆ. ಕೊರೊನಾ ಸೋಂಕಿತ ಕುಟುಂಬಸ್ಥರಿಂದ ಸರ್ಕಾರಿ ದರಕ್ಕಿಂತ ಹೆಚ್ಚು ಹಣ ಪಡೆದ ಆರೋಪದಡಿ ಕಳೆದ ತಿಂಗಳು 29 ರಂದು ನೋಟಿಸ್​ ಜಾರಿ ಮಾಡಿದರೂ ಎಚ್ಚೆತ್ತುಕೊಳ್ಳದೆ ಆಸ್ಪತ್ರೆ ಆಡಳಿತ ಮಂಡಳಿ ನಿಯಮ ಉಲ್ಲಂಘನೆ ಮುಂದುವರೆಸಿತ್ತು ಎನ್ನಲಾಗ್ತಿದೆ.

ಸೋಂಕಿತರ ಕುಟುಂಬಸ್ಥರಿಂದ ಲಕ್ಷಾಂತರ ರೂ.ವಸೂಲಿ ಆರೋಪ: ಖಾಸಗಿ ಆಸ್ಪತ್ರೆ ಮೇಲೆ‌ ದಾಳಿ

ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದಾಗ ಪ್ರತಿ ನಿಮಿಷಕ್ಕೆ ಆಕ್ಸಿಜನ್ ನೀಡಲು ಸಾವಿರಾರು ರೂಪಾಯಿ ಬಿಲ್ ಮಾಡಿರುವುದು ಗೊತ್ತಾಗಿದೆ. ಪ್ರತಿ ಗಂಟೆಗೆ ಆಕ್ಸಿಜನ್ ನೀಡಲು ಒಂದು ಸಾವಿರ ರೂಪಾಯಿ ಚಾರ್ಜ್​ನಂತೆ ಆಕ್ಸಿಜನ್, ಐಸಿಯು ಸೌಲಭ್ಯ ಹೆಸರಿನಲ್ಲಿ ನೂರಾರು ರೋಗಿಗಳಿಂದ ಈ ಆಸ್ಪತ್ರೆ ಲಕ್ಷಾಂತರ ರೂಪಾಯಿ ಪಡೆದಿದೆ‌ ಎಂಬ ಆರೋಪಗಳಿವೆ.

ರೋಗಿಗಳಿಂದ‌ ವಸೂಲಿ ಮಾಡಿದ್ದ ಹಣವನ್ನು‌ ಮರುಪಾವತಿದೆ ಹೋದರೆ ಹಾಗೂ ಮುಂದಿನ‌ ದಿನಗಳಲ್ಲಿ ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಆಸ್ಪತ್ರೆ ಮುಖ್ಯಸ್ಥರಿಗೆ ಅಲೋಕ್‌ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

Last Updated : Jun 2, 2021, 7:36 PM IST

ABOUT THE AUTHOR

...view details