ಬೆಂಗಳೂರು:ಬಾರ್ ಒಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಗೊಂಡನಹಳ್ಳಿಯಲ್ಲಿರುವ ವಿನಾಯಕ ವೈನ್ ಸ್ಟೋರ್ ನಲ್ಲಿ ನಡೆದಿದೆ.
ರಾಯಚೂರಿನ ಹಟ್ಟಿ ಮೂಲದ ಶಿವಕುಮಾರ್ (35) ಮೃತ ದುರ್ದೈವಿ. ಈತ ಕಳೆದ ಎರಡು ವರ್ಷಗಳಿಂದ ಬಾರ್ ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ, ನಿನ್ನೆ ಮದ್ಯಾಹ್ನದ ಹೊತ್ತಿಗೆ ಬಾರ್ನ ಮೇಲ್ಮಹಡಿಯಲ್ಲಿ ಈತ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದ್ದು, ಅನಂತರ ಆತ ಸಾವನ್ನಪ್ಪಿದ್ದು ಖಾತ್ರಿಯಾಗಿದೆ.
ಇನ್ನೂ, ಈತ ಮದ್ಯದ ದಾಸನಾಗಿದ್ದ ಎಂದು ತಿಳಿದು ಬಂದಿದೆ. ಮೇಲ್ಮಹಡಿಯಲ್ಲಿ ಬಿದ್ದಿದ್ದ ಈತನನ್ನ ನೋಡಿದವರು ಆತ ಕುಡಿದು ಮಲಗಿರಬಹುದು ಎಂದು ಭಾವಿಸಿದ್ದರು. ಆದರೆ, ಎಷ್ಟೇ ಸಮಯವಾದರೂ ಆತ ಮೇಲೇಳದಿದ್ದನ್ನು ಗಮನಿಸಿ ಆವಲಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಸ್ಥಳಕ್ಕೆ ಆಗಮಿಸಿದ ಪೊಲಿಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರಿಕ್ಷೆಗೆ ರವಾನಿಸಿದ್ದಾರೆ.
ಅತ್ತ ಮೃತನ ಕಾಲಿನಲ್ಲಿ ಗಾಯದ ಗುರುತಿದ್ದು ಅದನ್ನು ನೋಡಿದ ಸಂಬಂಧಿಕರು ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದು, ವಿಚಾರಣೆ ನಡೆದ ನಂತರ ಸತ್ಯಾಸತ್ಯತೆ ಹೊರಬೀಳಲಿದೆ.