ಕರ್ನಾಟಕ

karnataka

ETV Bharat / state

ಪಕ್ಷದ ಶಾಸಕರಿಂದ ಶಿಸ್ತು ಉಲ್ಲಂಘನೆ ಬಗ್ಗೆ ಸುದೀರ್ಘ ಚರ್ಚೆಯಾಗಿದೆ : ರೆಹಮಾನ್ ಖಾನ್ - ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್

ಕಾಂಗ್ರೆಸ್ ಪಕ್ಷ ಬೆಳೆದಿದ್ದೇ ಶಿಸ್ತಿನಿಂದ. ಪಕ್ಷದಿಂದ ನಾವು ನಮ್ಮಿಂದ ಪಕ್ಷ ಅಲ್ಲ. ಇದನ್ನ ನಾಯಕರು ಅರ್ಥ ಮಾಡಿಕೊಳ್ಳಬೇಕು. ಕೆಪಿಸಿಸಿ ಅಧ್ಯಕ್ಷ ಮತ್ತು ಸಿಎಲ್​ಪಿ ನಾಯಕರನ್ನ ಕಾರ್ಯಕರ್ತರು ನೋಡುತಿದ್ದಾರೆ. ಹೀಗಾಗಿ, ಸಮಸ್ಯೆ ಆಗಬಾರದು. ನಾವು ಒಂದಾಗಿ ಹೋದ್ರೆ ಅಧಿಕಾರಕ್ಕೆ ಬರ್ತೀವಿ..

Rahman Khan
ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್

By

Published : Jun 27, 2021, 2:35 PM IST

ಬೆಂಗಳೂರು :ಇತ್ತೀಚೆಗೆ ಕೆಲ ಶಾಸಕರು ನೀಡಿದ ಹೇಳಿಕೆಯ ಬಗ್ಗೆ ಇಂದು ಚರ್ಚಿಸಿದ್ದೇವೆ ಎಂದು ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ತಿಳಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ಸಿಎಂ ವಿಚಾರವಾಗಿ ಪಕ್ಷದಲ್ಲಿ ಕೆಲ ಶಾಸಕರು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಇಂದು ಶಿಸ್ತು ಸಮಿತಿ ಸಭೆ ನಡೆಸಿದ್ದೇವೆ ಎಂದರು.

ಕೆಲ ಶಾಸಕರು ನೀಡಿರುವ ಹೇಳಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಪಕ್ಷದ ಶಾಸಕರಿಂದ ಶಿಸ್ತು ಉಲ್ಲಂಘನೆ ಆಗಿದೆ. ಇದರ ಬಗ್ಗೆ ಸುದೀರ್ಘ ಚರ್ಚೆ ಆನ್​​ಲೈನ್ ಮೂಲಕ ಆಗಿದೆ. ಶಾಸಕರು ಹೇಳಿಕೆ ಕೊಟ್ಟಿರುವುದರ ಬಗ್ಗೆ ಮಾಹಿತಿ ಇನ್ನೂ ಬೇಕಿದೆ. ದಾಖಲೆ ಕಲೆ ಹಾಕಬೇಕಿದೆ. ಹೀಗಾಗಿ, ಮುಂದಿನ ವಾರಕ್ಕೆ ಸಭೆ ಮುಂದೂಡಿಕೆ ಆಗಿದೆ. ಮುಂದಿನ ಸಿಎಂ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಮಾರಕ ಮತ್ತು ಪಕ್ಷದ ಶಿಸ್ತು ಉಲ್ಲಂಘನೆ ಎಂದು ಅವರು ವಿವರಿಸಿದರು.

ಪಕ್ಷದ ಶಾಸಕರಿಂದ ಶಿಸ್ತು ಉಲ್ಲಂಘನೆ.. ರೆಹಮಾನ್ ಖಾನ್ ಪ್ರತಿಕ್ರಿಯೆ

ನಾವು ಸುಮೋಟೋ ಕೇಸ್ ತೆಗೆದುಕೊಂಡಿದ್ದೇವೆ. ಸುರ್ಜೇವಾಲಾ ಸಹ ಮಾತನಾಡಬೇಡಿ ಎಂದು ಹೇಳಿದ್ರು. ಅವರ ಹೇಳಿಕೆ ಆಧರಿಸಿ ಸುಮೋಟೋ ತೆಗೆದುಕೊಂಡಿದ್ದೇವೆ. ನಮ್ಮ ಬಳಿ ಯಾವುದೇ ದಾಖಲೆ ಇರಲಿಲ್ಲ. ವಿಡಿಯೋ ಕ್ಲಿಪ್ ಇರಲಿಲ್ಲ. ಪೇಪರ್ ಕಟ್ಟಿಂಗ್ಸ್​​ ಸಹ ಇರಲಿಲ್ಲ. ಇವೆಲ್ಲವನ್ನೂ ಕಲೆ ಹಾಕಲು ಸಮಯಾವಕಾಶ ಬೇಕಿರುವ ಹಿನ್ನೆಲೆ ಸಭೆ ಮುಂದೂಡಿದ್ದೇವೆ ಎಂದರು.

ಈ ಹಿಂದೆ ಆರ್‌ಆರ್‌ನಗರ ಉಪಚುನಾವಣೆಯಲ್ಲಿ ಕೆಲವರು ಕೊಟ್ಟ ಹೇಳಿಕೆ ಬಗ್ಗೆ ಸಹ ಚರ್ಚೆ ಮಾಡಿದ್ದೇವೆ. ಸಾರ್ವಜನಿಕವಾಗಿ ಹೇಳಿಕೆ ಕೊಡುವ ಅಧಿಕಾರ ಶಾಸಕರಿಗಿಲ್ಲ. ಆಂತರಿಕವಾಗಿ ಚರ್ಚೆ ಮಾಡಿ ಮುಂದಿನ ಸಿಎಂ ಯಾರು ಎಂದು ಹೇಳಲು ನಿಮಗೆ ಅಧಿಕಾರ ಇಲ್ಲ. ನೀವು ಕೆಪಿಸಿಸಿಗೆ ಹೋಗಿ ಅಧ್ಯಕ್ಷರಿಗೆ ಹೇಳಿ. ಎಐಸಿಸಿಗೆ ಹೋಗಿ ಅಧ್ಯಕ್ಷರಿಗೆ ತಿಳಿಸಿ. ಪಕ್ಷಕ್ಕೆ ಬಂದ ಮೇಲೆ ಪಕ್ಷದ ಸಂಪ್ರದಾಯ ನಾವು ಅನುಸರಿಸಿಬೇಕು ಎಂದು ಹೇಳಿಕೆ ನೀಡಿದ ಶಾಸಕರಿಗೆ ತಿಳಿಸಿದ್ದಾಗಿ ವಿವರಿಸಿದರು.

ನಮ್ಮದು ಶಿಸ್ತಿನ ಪಕ್ಷ :ಕಾಂಗ್ರೆಸ್ ಪಕ್ಷ ಬೆಳೆದಿದ್ದೇ ಶಿಸ್ತಿನಿಂದ. ಪಕ್ಷದಿಂದ ನಾವು ನಮ್ಮಿಂದ ಪಕ್ಷ ಅಲ್ಲ. ಇದನ್ನ ನಾಯಕರು ಅರ್ಥ ಮಾಡಿಕೊಳ್ಳಬೇಕು. ಕೆಪಿಸಿಸಿ ಅಧ್ಯಕ್ಷ ಮತ್ತು ಸಿಎಲ್​ಪಿ ನಾಯಕರನ್ನ ಕಾರ್ಯಕರ್ತರು ನೋಡುತಿದ್ದಾರೆ. ಹೀಗಾಗಿ, ಸಮಸ್ಯೆ ಆಗಬಾರದು. ನಾವು ಒಂದಾಗಿ ಹೋದ್ರೆ ಅಧಿಕಾರಕ್ಕೆ ಬರ್ತೀವಿ.

ನಮ್ಮಲ್ಲಿಯೇ ಕಚ್ಚಾಟ ಇದ್ರೆ ಬಿಜೆಪಿಗೆ ಲಾಭ ಆಗುತ್ತದೆ. ನಿನ್ನೆ ಕೆ ಬಿ ಕೋಳಿವಾಡ ಸಹ ಇದನ್ನೇ ಹೇಳಿದ್ದಾರೆ. ಪಕ್ಷ ಮುಖ್ಯ. ಶಿಸ್ತು ಮುಖ್ಯ. ಪಕ್ಷಕ್ಕೆ ಶಿಸ್ತಿನ ಇತಿಹಾಸ ಇದೆ. ನೆಹರು, ಪಟೇಲ್ ಶಿಸ್ತಿನಿಂದ ಇದ್ರು. ಅವರಿಂದಲೇ ಈ ಪಕ್ಷ. ಇದನ್ನ ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ಇದನ್ನೂ ಓದಿ:ಮುಂದಿನ ಸಿಎಂ ಪ್ರಸ್ತಾಪ ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಶಿಸ್ತು ಸಮಿತಿ: ಸಭೆ ಕರೆದ ರೆಹಮಾನ್ ಖಾನ್

ABOUT THE AUTHOR

...view details