ಬೆಂಗಳೂರು :ಸ್ಯಾಂಡಲ್ವುಡ್ಡ್ರಗ್ಸ್ ಕೇಸ್ನಲ್ಲಿ ಸಿಲುಕಿದ ಸಂಜನಾಗೆ ಜಾಮೀನು ಸಿಕ್ಕಿದ ಬೆನ್ನಲ್ಲೇ, ರಾಗಿಣಿ ಪರಪ್ಪನ ಅಗ್ರಹಾರದಲ್ಲಿ ತನ್ನ ಅಳಲು ತೋಡಿಕೊಂಡಿರುವ ಕಾರಣ ರಾಗಿಣಿ ತಂದೆ ರಾಕೇಶ್ ಹಾಗೂ ತಾಯಿ ರೋಹಿಣಿ ಇಂದು ನಗರ ಆಯುಕ್ತರ ಕಚೇರಿಯಲ್ಲಿರುವ ಸಿಸಿಬಿ ಜಂಟಿ ಆಯುಕ್ತರನ್ನ ಭೇಟಿ ಮಾಡೋಕೆ ಆಗಮಿಸಿದ್ದಾರೆ.
ಸಂಜನಾಗೆ ಜಾಮೀನು ಸಿಕ್ಕಿದ ಹಿನ್ನೆಲೆ ತನಿಖೆಯ ಮಾಹಿತಿ ಪಡೆಯಲು ಪೋಷಕರು ಆಗಮಿಸಿ ತನಿಖೆಯಿಂದಾಗಿ ಏನಾದ್ರೂ ಸಮಸ್ಯೆ ಆಗ್ತಿದ್ಯಾ? ಸಂಜನಾಗೆ ಹೇಗೆ ಜಾಮೀನು ಸಿಕ್ಕಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದಾರೆ.