ಕರ್ನಾಟಕ

karnataka

ETV Bharat / state

ರಾಗಿಣಿ ಇಂದು ವಿಚಾರಣೆಗೆ ಹಾಜರಾಗಲೇಬೇಕು, ಇಲ್ಲದಿದ್ರೆ ಬಂಧನ ಖಚಿತ ಎಂದು ಸಿಸಿಬಿ ಎಚ್ಚರಿಕೆ - bangalore crime news

ರಾಗಿಣಿ ಕೈಗೆ ಎರಡನೇ ನೋಟಿಸ್ ತಲುಪಿದ್ದು, ರಾಗಿಣಿ ಒಂದು ವೇಳೆ ಇಂದು ವಿಚಾರಣೆಗೆ ಹಾಜರಾಗದೇ ಇದ್ದರೆ ಮೂರನೇ ನೋಟಿಸ್ ಕೊಟ್ಟು ಬಂಧನ ಮಾಡುವುದಾಗಿ ಸಿಸಿಬಿ ಅಧಿಕಾರಿಗಳು ವಕೀಲರ ಮುಖಾಂತರ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಖ್ಯಾತ ನಟಿ ರಾಗಿಣಿ ದ್ವಿವೇದಿ
ಖ್ಯಾತ ನಟಿ ರಾಗಿಣಿ ದ್ವಿವೇದಿ

By

Published : Sep 4, 2020, 6:49 AM IST

Updated : Sep 4, 2020, 7:07 AM IST

ಬೆಂಗಳೂರು: ಖ್ಯಾತ ನಟಿ ರಾಗಿಣಿ ದ್ವಿವೇದಿ ಸ್ನೇಹಿತ ರವಿ ಅಲಿಯಾಸ್ ರವಿಶಂಕರ್ ಬಂಧನದ ಬೆನ್ನಲ್ಲೇ ರಾಗಿಣಿಗೆ ಸಂಕಷ್ಟ ಶುರುವಾಗಿದೆ.

ಸಿಸಿಬಿ ಪೊಲೀಸರು ನಿನ್ನೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು ಕೂಡ ವೈಯಕ್ತಿಕ ಕಾರಣ ಹಾಗೂ ಆರೋಗ್ಯ ಸರಿ ಇಲ್ಲ ಎಂದು ನಿನ್ನೆಯ ವಿಚಾರಣೆಯಿಂದ ನಟಿ ರಾಗಿಣಿ ತಪ್ಪಿಸಿಕೊಂಡಿದ್ದರು. ನನಗೆ ಸಿಸಿಬಿ ನೋಟಿಸ್ ಬಂದಿದೆ. ಆದರೆ, ತಾವು ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ಟ್ವೀಟ್​ ಮೂಲಕ ತಿಳಿಸಿದ್ದರು.

ಪ್ರಕರಣ ಗಂಭೀರತೆ ಪಡೆದುಕೊಳ್ಳುತ್ತಿರುವ ಹಿನ್ನೆಲೆ ಸಿಸಿಬಿ ಪೊಲೀಸರು ಡ್ರಗ್ ಮಾಫಿಯಾದ ಬೇರನ್ನೇ ಕಿತ್ತು ಹಾಕಲು ಹೊರಟಿದೆ. ರಾಗಿಣಿ ಆಪ್ತ ರವಿಶಂಕರ್ ಪಾರ್ಟಿಗಳಿಗೆ, ನಟಿಯರಿಗೆ ಡ್ರಗ್ಸ್​ ಪೂರೈಕೆ ಮಾಡುತ್ತಿದ್ದ ವಿಚಾರ ಕೂಡ ಬಯಲಾಗಿದೆ. ಹೀಗಾಗಿ ಈ ಡ್ರಗ್ ಹಿಂದೆ ರಾಗಿಣಿ ಕೈವಾಡ ಇದೆಯಾ ಅನ್ನೋದ್ರ ತನಿಖೆ ಜೊತೆಗೆ ಆರ್​ಟಿಒದಲ್ಲಿ ಕೆಲಸ ನಿರ್ವಹಣೆ ಮಾಡುವ ರವಿ ಶಂಕರ್​ಗೆ ರಾಗಿಣಿ ಹೇಗೆ ಪರಿಚಯ, ಇಬ್ಬರೂ ಯಾವ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು? ತಿಂಗಳಿಗೆ ರವಿಗೆ 30ರಿಂದ 35ಸಾವಿರ ರೂಪಾಯಿ ಸಂಬಳ ಇದೆ. ಆದರೆ, ಈತನ ವಹಿವಾಟು ದಿನಕ್ಕೆ ಒಂದು ಲಕ್ಷ ಹೇಗೆ ಸಾಧ್ಯ? ಹೀಗೆ ನಾನಾ ಪ್ರಶ್ನೆಗಳನ್ನು ಸಿಸಿಬಿಯವರು ಮುಂದಿಡುವ ಸಾಧ್ಯತೆ ಇದೆ.

ಸಿಸಿಬಿ ಹಿರಿಯಾಧಿಕಾರಿಯಾದ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿ ಕುಮಾರ್‌, ಎಸಿಪಿಗಳ ತಂಡ ಪ್ರಶ್ನೆಗಳನ್ನು ಕೇಳಲು ಸಿದ್ಧವಾಗಿದೆ. ಮತ್ತೊಂದೆಡೆ ರಾಗಿಣಿ ಕೈಗೆ ಎರಡನೇ ನೋಟಿಸ್ ತಲುಪಿದ್ದು, ರಾಗಿಣಿ ಒಂದು ವೇಳೆ ಇಂದು ವಿಚಾರಣೆಗೆ ಹಾಜರಾಗದೆ ಇದ್ದರೆ ಮೂರನೇ ನೋಟಿಸ್ ಕೊಟ್ಟು ಬಂಧನ ಮಾಡುವುದಾಗಿ ಸಿಸಿಬಿ ಅಧಿಕಾರಿಗಳು ವಕೀಲರ ಮುಖಾಂತರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ವಕೀಲರು ಪೊಲೀಸರಿಗೆ ಮರುತ್ತರ ನೀಡಿ, ರಾಗಿಣಿ ಕೊರೊನಾ ವಾರಿಯರ್ಸ್​ಗೆ ಊಟದ ವ್ಯವಸ್ಥೆ‌, ಕೋವಿಡ್ ಇತರ ಕೆಲಸ ಹಾಗೂ ವೈಯಕ್ತಿಕ ‌ಕೆಲಸಗಳಲ್ಲಿ ಬ್ಯುಸಿ ಇದ್ದಾರೆಂಬ ಸಬೂಬು ಹೇಳಿದ್ದಾರೆ. ಆದರೆ, ಸಿಸಿಬಿ ಯಾವುದಕ್ಕೂ ಬಗ್ಗದೆ ಇಂದು ವಿಚಾರಣೆಗೆ ಹಾಜರಾಗಲೇಬೇಕೆಂದು ತಮ್ಮ ನಿರ್ಧಾರವನ್ನು ಖಡಕ್​​ ಆಗಿ ತಿಳಿಸಿದೆ.

Last Updated : Sep 4, 2020, 7:07 AM IST

ABOUT THE AUTHOR

...view details