ಬೆಂಗಳೂರು:ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟಿ ಸಂಜನಾ, ರಾಗಿಣಿ, ರಾಹುಲ್, ವೀರೇನ್ ಖನ್ನಾ ಹಾಗೂ ರವಿಶಂಕರ್ಗೆ ಮತ್ತೆ ಸಂಕಷ್ಟ ಎದುರಾಗಿದೆ.
ರಾಗಿಣಿ - ಸಂಜನಾಗೆ ನಾಳೆಯಿಂದ ಜೈಲಿನಲ್ಲಿ ಮತ್ತೆ ನಡೆಯಲಿದೆ ಡ್ರಿಲ್ - Ragini-Sanjana investigation will done in jail news
ನಟಿ ಸಂಜನಾ, ರಾಗಿಣಿ ವಿಚಾರಣೆಯನ್ನು ಜೈಲಿನಲ್ಲೇ ನಡೆಸಲು ಎನ್ಡಿಪಿಎಸ್ ವಿಶೇಷ ಕೋರ್ಟ್ ಇಡಿ ಅಧಿಕಾರಿಗಳಿಗೆ ಅನುಮತಿ ನೀಡಿದೆ.
ನಾಳೆಯಿಂದ ಜೈಲಿನಲ್ಲಿಯೇ ಇಡಿ ಅಧಿಕಾರಿಗಳು ವಿಚಾರಣೆಗೆ ನಡೆಸಲು ಎನ್ಡಿಪಿಎಸ್ ವಿಶೇಷ ಕೋರ್ಟ್ನಿಂದ ಅನುಮತಿ ಪಡೆದಿದ್ದಾರೆ. ಡ್ರಗ್ಸ್ ಪ್ರಕರಣದ ಜೊತೆ ಹವಾಲಾ ದಂಧೆ, ಕೋಟಿ ಕೋಟಿ ಆಸ್ತಿಗಳಿಕೆ ಮಾಡಿರುವ ಆರೋಪ ಹಿನ್ನೆಲೆ ಇಡಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ, ತನಿಖೆಗೆ ಇಳಿದಿತ್ತು.
ಜೈಲಿನಲ್ಲಿ ವಿಚಾರಣೆ ನಡೆಸಲು NDPS ವಿಶೇಷ ನ್ಯಾಯಾಲಯದಿಂದ ಅನುಮತಿ ದೊರೆತ ಹಿನ್ನೆಲೆ ಐದು ದಿನಗಳ ಕಾಲ ಇಡಿ ಅಧಿಕಾರಿಗಳು ಜೈಲಿನಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಕೇಸ್ ಕುರಿತು ವಿಚಾರಣೆಯನ್ನು ನಾಳೆಯಿಂದ ಶುರು ಮಾಡಲಿದ್ದಾರೆ. ಡ್ರಗ್ಸ್ ಪ್ರಕರಣ ಮಾತ್ರ ಕಂಟಕವಾಗಿದ್ದ, ಆರೋಪಿಗಳಿಗೆ ಸದ್ಯ ಆಸ್ತಿಗಳಿಕೆ ಹಾಗೂ ನಗದು ವಿಚಾರ ಕೂಡ ಕಂಟಕವಾಗಲಿದೆ.