ಕರ್ನಾಟಕ

karnataka

ETV Bharat / state

ರಾಗಿಣಿ-ಸಂಜನಾ ಕಸ್ಟಡಿ ಅಂತ್ಯ: ನಟಿಯರ ಭವಿಷ್ಯ ಇಂದು ನಿರ್ಧಾರ - ನಟಿ ಸಂಜನಾ

ಸ್ಯಾಂಡಲ್​ವುಡ್​ಗೆ ಮಾದಕ ನಂಟು ಆರೋಪದ ಹಿನ್ನೆಲೆಯಲ್ಲಿ ಕಸ್ಟಡಿಯಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಕಸ್ಟಡಿ ಇಂದಿಗೆ ಅಂತ್ಯವಾಗಲಿದ್ದು, ಜೈಲಾ-ಬೇಲಾ ಎಂಬುದು ನಿರ್ಧಾರವಾಗಲಿದೆ.

ರಾಗಿಣಿ-ಸಂಜನಾ ಕಸ್ಟಡಿ ಅಂತ್ಯ
ರಾಗಿಣಿ-ಸಂಜನಾ ಕಸ್ಟಡಿ ಅಂತ್ಯ

By

Published : Sep 14, 2020, 7:17 AM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಮಾದಕ ನಂಟು ಆರೋಪದ ಹಿನ್ನೆಲೆಯಲ್ಲಿ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಭಾನುವಾರವಾದರೂ ವಿಚಾರಣೆ ನಡೆಸಿ ಬಹುತೇಕ ಮಾಹಿತಿ ಪಡೆದಿದ್ದಾರೆ. ಇಂದು ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ಇಬ್ಬರು ನಟಿಮಣಿಯರು ಸೇರಿ 6 ಜನರನ್ನ ವಿಡಿಯೋ ಕಾನ್ಫರೆನ್ಸ್ ಮುಖಾಂತರ 1ನೇ ಎಸಿಎಂಎಂ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

ಕಳೆದ ಶುಕ್ರವಾರ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿ 5 ದಿವಸಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಮೂರು ದಿವಸ ಮಾತ್ತ ಕಸ್ಟಡಿಗೆ ನೀಡಿದ್ದು, ಇಂದು ನಟಿ‌ಮಣಿಯರ ಕಸ್ಟಡಿ ಅಂತ್ಯವಾಗಲಿದೆ. ಈ ಕಾರಣದಿಂದ ನ್ಯಾಯಾಲಯ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ.

ಸದ್ಯ ರಾಗಿಣಿ ಕಸ್ಟಡಿ ಇಂದಿಗೆ 11ನೇ ದಿನವಾಗಿದ್ದು, ಬಹುತೇಕವಾಗಿ ಪರಪ್ಪನ ಅಗ್ರಹಾರ ಜೈಲು ಪಾಲಾಗುವುದು ಖಚಿತವಾಗಿದೆ. ಆದರೆ ನಟಿ ಸಂಜನಾ ಕಸ್ಟಡಿ ಇಂದಿಗೆ ಏಳನೇ ದಿನವಾಗಿದೆ. ಮತ್ತೊಂದೆಡೆ ಸಂಜನಾ ಆಪ್ತರು ಹೆಚ್ಚಾಗಿ ಪ್ರಕರಣದಲ್ಲಿ ಭಾಗಿಯಾದ ಕಾರಣ ಸಂಜನಾ ತನಿಖೆ ಬಹುತೇಕವಾಗಿ ಅಗತ್ಯವಿದೆ. ಹೀಗಾಗಿ ಪೊಲೀಸರು ರಾಗಿಣಿಯನ್ನು ಜೈಲಿಗೆ ಕಳುಹಿಸಿ ಸಂಜನಾರನ್ನ ಮತ್ತೆ ವಿಚಾರಣೆಗೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಇವರ ಆಪ್ತರಾದ ರಾಹುಲ್, ರವಿಶಂಕರ್, ಲೂಮ್ ಪೆಪ್ಪರ್, ಪ್ರಶಾಂತ್ ರಾಂಕ ಕಸ್ಟಡಿ ಅಂತ್ಯವಾಗಲಿದ್ದು, ಇವರು ಪರಪ್ಪನ ಅಗ್ರಹಾರ ಜೈಲು ಪಾಲಾಗುವ ಸಾಧ್ಯತೆಯಿದೆ.

ಸದ್ಯ ನಟಿಮಣಿಯರಿಬ್ಬರಿಗೆ ನಿನ್ನೆ ಪೂರ್ತಿ ಮಡಿವಾಳದ ಎಫ್ಎಸ್​ಎಲ್ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ.

ABOUT THE AUTHOR

...view details