ಬೆಂಗಳೂರು:ನಟಿ ರಾಗಿಣಿ ದ್ವಿವೇದಿ ಸಿಸಿಬಿ ಪೊಲೀಸರ ವಶದಲ್ಲಿರುವ ಕಾರಣ ಚಾಮರಾಜಪೇಟೆ ಸಿಸಿಬಿ ಕಚೇರಿಗೆ ರಾಗಿಣಿ ತಂದೆ ರಾಕೇಶ್ ದ್ವಿವೇದಿ, ತಾಯಿ ರೋಹಿಣಿ ದ್ವೀವೇದಿ ಹಾಗೂ ಸಹೋದರ ಆಗಮಿಸಿದ್ದಾರೆ.
ರಾಗಿಣಿ ತಂದೆ-ತಾಯಿ ಸಿಸಿಬಿ ಕಚೇರಿಗೆ ಭೇಟಿ: ಕುಟುಂಬಸ್ಥರಲ್ಲಿ ಆತಂಕ - ಬೆಂಗಳೂರು
ಚಾಮರಾಜಪೇಟೆ ಸಿಸಿಬಿ ಕಚೇರಿಗೆ ರಾಗಿಣಿ ತಂದೆ ರಾಕೇಶ್ ದ್ವಿವೇದಿ, ತಾಯಿ ರೋಹಿಣಿ ದ್ವೀವೇದಿ ಹಾಗೂ ಸಹೋದರ ಆಗಮಿಸಿದ್ದಾರೆ.
ರಾಗಿಣಿ
ರಾಗಿಣಿ ಸದ್ಯ ಡೈರಿ ಸರ್ಕಲ್ ಬಳಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದು, ಮತ್ತೆ ಸಿಸಿಬಿ ಪೊಲೀಸರು ಇಂದು ವಿಚಾರಣೆ ನಡೆಸಲಿದ್ದಾರೆ. ಹೀಗಾಗಿ ರಾಗಿಣಿ ತಾಯಿ ಮನೆಯಿಂದ ಮಾಡಿರುವ ಅಡುಗೆಯನ್ನ ತಂದಿದ್ದು, ಅದನ್ನ ಅಧಿಕಾರಿಗಳ ಜೊತೆ ಸಿಸಿಬಿ ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ.
ಸದ್ಯ ಮಗಳ ಬಂಧನದಿಂದ ಕುಟುಂಬಸ್ಥರಲ್ಲಿ ಆತಂಕ ನಿರ್ಮಾಣವಾಗಿದ್ದು, ಸಿಸಿಬಿ ಕಚೇರಿಯಲ್ಲಿ ಕುಟುಂಬಸ್ಥರು ಮೊಕ್ಕಾಂ ಹೂಡಿದ್ದಾರೆ.
Last Updated : Sep 5, 2020, 12:53 PM IST