ಕರ್ನಾಟಕ

karnataka

ETV Bharat / state

ಕಸ್ಟಡಿಯಲ್ಲಿರುವ ರಾಗಿಣಿಯನ್ನು ಭೇಟಿಯಾಗಲು ಸಾಂತ್ವನ ಕೇಂದ್ರಕ್ಕೆ ಬಂದ‌ ಕುಟುಂಬಸ್ಥರು - Ragini in CCB custody

ಸ್ಯಾಂಡಲ್​ವುಡ್​ ಡ್ರಗ್​ ಮಾಫಿಯಾ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ರಾಗಿಣಿಗೆ ಇಂದು ಬೇಲ್ ಸಿಗುತ್ತದೆ ಎಂದು ಅವರ ಕುಟುಂಬಸ್ಥರು ಅಶಾಭಾವನೆ ಹೊಂದಿದ್ರು. ಆದರೆ ಇನ್ನೂ 5 ದಿನ ಸಾಂತ್ವನ ಕೇಂದ್ರದಲ್ಲೇ ರಾಗಿಣಿ ವಾಸ್ತವ್ಯ ಮುಂದುವರೆದಿರುವ ಹಿನ್ನೆಲೆ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿ ಆಕೆಗೆ ‌ಹೊದಿಕೆ, ದಿಂಬುಗಳನ್ನು ತಂದು ಕೊಟ್ಟಿದ್ದಾರೆ.

Ragini parents came to meet actress who is in CCB custody
ಕಸ್ಟಡಿಯಲ್ಲಿರುವ ರಾಗಿಣಿಯನ್ನು ಭೇಟಿಯಾಗಲು ಸಾಂತ್ವನ ಕೇಂದ್ರಕ್ಕೆ ಬಂದ‌ ಕುಟುಂಬಸ್ಥರು

By

Published : Sep 7, 2020, 8:48 PM IST

ಬೆಂಗಳೂರು: ರಾಗಿಣಿ‌‌ ಕಸ್ಟಡಿಯಲ್ಲಿರುವ ಹಿನ್ನೆಲೆ ನಗರದ ಡೈರಿ ಸರ್ಕಲ್ ಬಳಿ ಇರುವ ಸಾಂತ್ವನ‌ ಕೇಂದ್ರಕ್ಕೆ ರಾಗಿಣಿ ದ್ವಿವೇದಿ ತಂದೆ, ತಾಯಿ ಹಾಗೂ ತಮ್ಮ ಭೇಟಿ ನೀಡಿದ್ದಾರೆ.

ಕಸ್ಟಡಿಯಲ್ಲಿರುವ ರಾಗಿಣಿಯನ್ನು ಭೇಟಿಯಾಗಲು ಸಾಂತ್ವನ ಕೇಂದ್ರಕ್ಕೆ ಬಂದ‌ ಕುಟುಂಬಸ್ಥರು

ಸ್ಯಾಂಡಲ್​ವುಡ್​ ಡ್ರಗ್​ ಮಾಫಿಯಾ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ರಾಗಿಣಿಗೆ ಇಂದು ಬೇಲ್ ಸಿಗುತ್ತದೆ ಎಂದು ಅವರ ಕುಟುಂಬಸ್ಥರು ಅಶಾಭಾವನೆ ಹೊಂದಿದ್ರು. ಆದರೆ ಇನ್ನೂ 5 ದಿನ ಸಾಂತ್ವನ ಕೇಂದ್ರದಲ್ಲೇ ರಾಗಿಣಿ ವಾಸ್ತವ್ಯ ಮುಂದುವರೆದಿರುವ ಹಿನ್ನೆಲೆ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿ ಆಕೆಗೆ ‌ಹೊದಿಕೆ, ದಿಂಬುಗಳನ್ನು ತಂದು ಕೊಟ್ಟಿದ್ದಾರೆ.

ರಾಗಿಣಿ ವಾಟ್ಸಪ್ ಡೇಟಾವನ್ನು ಸಿಸಿಬಿ ಟೆಕ್ನಿಕಲ್ ಟೀಮ್ ರಿಟ್ರೇವ್ ಮಾಡಿದ್ದು, ರಾಗಿಣಿ ಇನ್ನಷ್ಟು ಪೇಚಿಗೆ ಸಿಲುಕಿದ್ದಾರೆ. ಸಿಸಿಬಿ ರೈಡ್ ಆಗೋ‌ ಮುನ್ಸೂಚನೆ ಹಿನ್ನೆಲೆ ಈಕೆ ಡೇಟಾ ಡಿಲೀಟ್ ಮಾಡಿದ್ದರು. ಈ ಕುರಿತಂತೆ ಸಿಸಿಬಿ ಪ್ರಶ್ನೆ ಕೇಳಿತ್ತು. ಆಗ ನಾನು ಕೆಲ ದಿನಗಳಿಗೊಮ್ಮೆ ಡಿಲೀಟ್ ಮಾಡ್ತೀನಿ. ಹೀಗಾಗೆ ಮೊನ್ನೆ ಮತ್ತೊಮ್ಮೆ ಡಿಲೀಟ್ ಮಾಡಿದ್ದೆ ಅಂತ ಹೇಳಿದ್ದರು. ಸದ್ಯ ಸಿಸಿಬಿ ವಾಟ್ಸಪ್ ಚಾಟ್, ಮೇಸೆಜ್ ರಿಟ್ರೀವ್ ಮಾಡಿದ್ದು, ರಿಟ್ರೀವ್ ಆದ ದಾಖಲೆಗಳನ್ನು ಮುಂದಿಟ್ಟುಕೊಂಡು ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಲು ಸಿದ್ದತೆ ನಡೆಸಿದ್ದಾರೆಂದು ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ‌ ಲಭ್ಯವಾಗಿದೆ.

ABOUT THE AUTHOR

...view details