ಬೆಂಗಳೂರು: ಕಡಿಮೆ ಬೆಲೆಯಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿಸಬೇಕೆ? ಹಾಗಾದರೆ, ಕ್ರೆಡ್ ಆರ್ ಸಂಸ್ಥೆಯು ನಿಮಗಾಗಿ ಈ ಅವಕಾಶ ತಂದುಕೊಟ್ಟಿದೆ.
ಬೆಂಗಳೂರಿನಲ್ಲಿ ಕ್ರೆಡ್ ಆರ್ ಶಾಖೆ ಆರಂಭ... ಸೆಕೆಂಡ್ ಹ್ಯಾಂಡ್ ಬೈಕ್ ಶೋರೂಂ ಉದ್ಘಾಟಿಸಿದ ನಟಿ ರಾಗಿಣಿ - Ragini Bike Show Room Opening.
ಬಳಕೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳುವವರಿಗೆ ಇದೊಂದು ಶುಭಸುದ್ದಿ. ಈ ಶೋ ರೂಂ ನಲ್ಲಿ ಎಲ್ಲಾ ರೀತಿಯ ಬೈಕ್ಗಳಿದ್ದು, ಬೈಕ್ಗಳ ಆಯಾ ಗುಣಮಟ್ಟದ ಮೇರೆಗೆ ಬೆಲೆ ನಿಗದಿ ಮಾಡಲಾಗಿದೆ.
![ಬೆಂಗಳೂರಿನಲ್ಲಿ ಕ್ರೆಡ್ ಆರ್ ಶಾಖೆ ಆರಂಭ... ಸೆಕೆಂಡ್ ಹ್ಯಾಂಡ್ ಬೈಕ್ ಶೋರೂಂ ಉದ್ಘಾಟಿಸಿದ ನಟಿ ರಾಗಿಣಿ](https://etvbharatimages.akamaized.net/etvbharat/prod-images/768-512-3694307-thumbnail-3x2-nin.jpg)
ಕಡಿಮೆ ಬೆಲೆಗೆ ಬೈಕ್ ಕೊಂಡುಕೊಳ್ಳುವವರಿಗೆ ಶುಭಸುದ್ದಿ
ಮೀನಾಕ್ಷಿ ಮೋಟರ್ಸ್ ಬೆಳ್ಳಂದೂರಿನಲ್ಲಿ ಈ ನೂತನ ಶೋರೂಂ ಅನ್ನು ಆರಂಭಿಸಿದೆ. ದಕ್ಷಿಣ ಭಾರತದಲ್ಲಿ ಬಳಕೆ ಮಾಡಿದ ದ್ವಿಚಕ್ರ ವಾಹನಗಳ ಅತಿದೊಡ್ಡ ಶೋರೂಂ ಇದಾಗಿದ್ದು, ಶೋರೂಂ ನ್ನು ನಟಿ ರಾಗಿಣಿ ದ್ವಿವೇದಿ ಉದ್ಘಾಟನೆ ಮಾಡಿದ್ದಾರೆ.
ಕಡಿಮೆ ಬೆಲೆಗೆ ಬೈಕ್ ಕೊಂಡುಕೊಳ್ಳುವವರಿಗೆ ಶುಭಸುದ್ದಿ
ನಂತರ ಮಾತನಾಡಿದ ರಾಗಿಣಿ ದ್ವಿವೇದಿ, ನಾನು ಎಂಟು, ಒಂಬತ್ತನೇ ತರಗತಿಯಲ್ಲಿ ಇರುವಾಗಲೇ ಬೈಕ್ ರೈಡ್ ಮಾಡುತ್ತಿದ್ದೆ. ಆಗ ನಾನು ಸನ್ನಿ ಸ್ಕೂಟಿಯನ್ನು ಒಡಿಸುತ್ತಿದ್ದೆ. ಈಗ ನನಗೆ ತುಂಬಾ ಇಷ್ಟವಾದ ಬೈಕ್ ಅಂದ್ರೆ ಆಕ್ಟಿವ್ ಹೊಂಡ ಯಾವಗಲೂ ಜಾಲಿ ರೈಡ್ ಮಾಡಲು ಇಷ್ಟ ಪಡುತ್ತೇನೆ. ಎಲ್ಲಾ ರೀತಿಯ ಬೈಕ್ಗಳನ್ನು ಓಡಿಸಿದ್ದೆನೆ. ಬೈಕ್ ರೈಡ್ ಅಂದ್ರೆ ತುಂಬಾ ಇಷ್ಟ ಎಂದರು.