ಬೆಂಗಳೂರು:ರಾಗಿಣಿಯನ್ನ ಎಲ್ಲಿ ವಿಚಾರಣೆ ನಡೆಸಬೇಕು ಎಂಬ ಗೊಂದಲ ತನಿಖಾಧಿಕಾರಿಗಳಲ್ಲಿ ಎದ್ದಿದೆ. ಯಾಕಂದ್ರೆ ಸದ್ಯ ಸಿಸಿಬಿ ಕಚೇರಿಯಲ್ಲಿ ರಾಗಿಣಿ ಆಪ್ತ ರವಿಶಂಕರ್, ಸಂಜನಾ ಆಪ್ತ ರಾಹುಲ್ ಹಾಗೂ ಕಾರ್ತಿಕ್ ಮತ್ತೋರ್ವ ಬಂಧಿತ ವೀರೆನ್ ಖನ್ನಾ ವಿಚಾರಣೆ ನಡೆಯುತ್ತಿದೆ. ಹೀಗಾಗಿ FSL ಕಚೇರಿಯಲ್ಲೋ ಅಥವಾ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸೋದ ಅನ್ನೋ ಗೊಂದಲ ಎದ್ದಿದೆ.
ನಿನ್ನೆ ರಾಗಿಣಿ ಮನೆ ಮೇಲೆ ದಾಳಿ ಮಾಡಿದಾಗ ತನಿಖೆಗೆ ಬೇಕಾದ ಬಹುತೇಕ ವಸ್ತುಗಳು ಪತ್ತೆಯಾಗಿದ್ದವು. ಈ ವೇಳೆ ತನಿಖಾಧಿಕಾರಿಗಳು ಕೂಡ ಮನೆಯಲ್ಲಿ ಜಪ್ತಿಯಾದ ವಸ್ತು ಯಾವುದು ಎಂದು ಹೇಳಲು ಸಾಧ್ಯವಿಲ್ಲವೆಂದು ತಿಳಿಸಿದ್ರು. ನಿನ್ನೆ ದಾಳಿ ವೇಳೆ ಮತ್ತಷ್ಟು ಶೋಧ ಮಾಡೋದು ಬಾಕಿ ಇತ್ತು. ಹೀಗಾಗಿ ರಾಗಿಣಿಯನ್ನ ಮನೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಬೇಕಾ.? ಅಥವಾ ಎಫ್ಎಸ್ಎಲ್ಗೆ ಕರೆದೊಯ್ಯಬೇಕಾ ಎಂಬುದರ ಬಗ್ಗೆ ಅದಿಕಾರಿಗಳು 11 ಗಂಟೆಯ ಒಳಗಡೆ ನಿರ್ಧಾರ ಮಾಡಲಿದ್ದಾರೆ.