ಬೆಂಗಳೂರು: ಡ್ರಗ್ಸ್ ಆರೋಪ ಪ್ರಕರಣಕ್ಕೆ ಸಂಬಂದಿಸಿದಂತೆ ನಟಿ ರಾಗಿಣಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಈ ನೋಟಿಸ್ಗೆ ನಟಿ ರಾಗಿಣಿ ತಮ್ಮ ವಕೀಲರ ಮೂಲಕ ಸಿಸಿಬಿಗೆ ಮಾಹಿತಿ ನೀಡಿದ್ದಾರೆ.
'ನಾಳೆ ಹಾಜರಾಗ್ತೀನಿ' ಎಂದ ತುಪ್ಪದ ಬೆಡಗಿ... ನಟಿ ರಾಗಿಣಿ ಬದಲು ಹಾಜರಾದ ವಕೀಲರು - ನಟಿ ರಾಗಿಣಿ ದ್ವಿವೇದಿ ಸಿಸಿಬಿ ವಿಚಾರಣೆ
ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಬೇಕಿದ್ದ ನಟಿ ರಾಗಿಣಿ ದ್ವಿವೇದಿ ಇದುವರೆಗೂ ಹಾಜರಾಗಿಲ್ಲ. ಆದ್ರೆ ಇದಕ್ಕೆ ಸಂಬಂಧಿಸಿದಂತೆ ತಮ್ಮ ವಕೀಲರನ್ನು ಸಿಸಿಬಿ ಕಚೇರಿಗೆ ಕಳಿಸಿದ್ದಾರೆ. ಹೀಗಾಗಿ ಸಿಸಿಬಿ ಕಚೇರಿಗೆ ನಾಳೆ ಮತ್ತೆ ಹಾಜರಾಗಲು ಸೂಚಿಸಿದೆ.
!['ನಾಳೆ ಹಾಜರಾಗ್ತೀನಿ' ಎಂದ ತುಪ್ಪದ ಬೆಡಗಿ... ನಟಿ ರಾಗಿಣಿ ಬದಲು ಹಾಜರಾದ ವಕೀಲರು Ragini Dwivedi](https://etvbharatimages.akamaized.net/etvbharat/prod-images/768-512-8661192-thumbnail-3x2-bng.jpg)
"ಇವತ್ತು ಬರಲ್ಲ.. ನಾಳೆ ವಿಚಾರಣೆಗೆ ಹಾಜರಾಗ್ತೀನಿ.." ಅಂತ ವಕೀಲರ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ರಾಗಿಣಿ ವಕೀಲರು ಸಿಸಿಬಿಗೆ ಖುದ್ದಾಗಿ ಹಾಜರಾಗಿ ಎಂದು ತಿಳಿಸಿದ್ದಾರೆ. ನಟಿ ರಾಗಿಣಿ ಆಪ್ತ ರವಿಶಂಕರ್ ಅವರನ್ನು ಬುಧವಾರ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಹಲವಾರು ಮಾಹಿತಿ ಕಲೆ ಹಾಕಿದ್ದರು. ನಂತರ ರಾಗಿಣಿ ದ್ವಿವೇದಿಗೆ ವಾಟ್ಸ್ಆ್ಯಪ್ ಹಾಗೂ ಮನೆಗೆ ನೋಟಿಸ್ ನೀಡಿ ಇಂದು ಬೆಳಗ್ಗೆ 10 ಗಂಟೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ಇದುವರೆಗೂ ರಾಗಿಣಿ ವಿಚಾರಣೆಗೆ ಹಾಜರಾಗಿಲ್ಲ.
ಈ ಬಗ್ಗೆ ರಾಗಿಣಿಯನ್ನ ಫೋನ್ ಮೂಲಕ ಸಂಪರ್ಕಿಸಿದಾಗ ಯಾವುದಕ್ಕೂ ರಾಗಿಣಿ ದ್ವಿವೇದಿ ಪ್ರತಿಕ್ರಿಯಿಸಿಲ್ಲ. ಮತ್ತೊಂದೆಡೆ ರಾಗಿಣಿ ದ್ವಿವೇದಿ ತಮ್ಮ ವಕೀಲರ ಮೂಲಕ ಮನವಿ ಮಾಡಿದ್ದಾರೆ. ನೀವು ಕೇಳಿದಷ್ಟು ಸಮಯ ಕೊಡಲು ಆಗುವುದಿಲ್ಲ. ನಾಳೆ ಖುದ್ದಾಗಿ ಹಾಜರಾಗವೇಕು ಎಂದು ಸಿಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ.