ಬೆಂಗಳೂರು: ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸಬೇಕು ಎಂಬ ಖಾಸಗಿ ವಿಧೇಯಕ ಮಂಡನೆಗೆ ಅವಕಾಶ ನೀಡದೇ ಇರುವುದಕ್ಕೆ ಕಾಂಗ್ರೆಸ್ ಸದಸ್ಯ ರಘು ಆಚಾರ್ ಸದನದ ಬಾವಿಗಿಳಿದು ಧರಣಿ ನಡೆಸಿದರು.
ಜನಪ್ರತಿನಿಧಿಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದಬೇಕು... ಖಾಸಗಿ ವಿಧೇಯಕ ಮಂಡಿಸದ್ದಕ್ಕೆ ರಘು ಆಚಾರ್ ಧರಣಿ
ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸಬೇಕೆಂಬ ಖಾಸಗಿ ವಿಧೇಯಕ ಮಂಡನೆಗೆ ಅವಕಾಶ ನೀಡದೇ ಇರುವುದಕ್ಕೆ ಕಾಂಗ್ರೆಸ್ ಸದಸ್ಯ ರಘು ಆಚಾರ್ ಸದನದ ಬಾವಿಗಿಳಿದು ಧರಣಿ ನಡೆಸಿದರು.
ವಿಧಾನ ಪರಿಷತ್ನ ಬೆಳಗಿನ ಕಲಾಪದಲ್ಲಿ ಖಾಸಗಿ ವಿಧೇಯಕ ಮಂಡನೆಗೆ ರಘು ಆಚಾರ್ ಅವಕಾಶ ಕೋರಿದರು. ಆದರೆ ಅವಕಾಶ ನೀಡದೇ ಇರುವುದಕ್ಕೆ ಅಸಮಧಾನಗೊಂಡು ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಕಾಂಗ್ರೆಸ್, ಜೆಡಿಎಸ್ನ ಸದಸ್ಯರಿಂದ ಮನವೊಲಿಸುವ ಪ್ರಯತ್ನ ನಡೆಸಲಾಯಿತಾದರೂ ಯಾವುದಕ್ಕೂ ಬಗ್ಗದೆ ಸದನದ ಬಾವಿಯಲ್ಲೇ ಕುಳಿತು ಧರಣಿ ನಡೆಸಿದರು.
ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮಾತನಾಡಿ, ನೀವು ಸದನಕ್ಕೆ ಬಂದಿರುವುದು ನಿಮ್ಮ ಪಕ್ಷದ ತೀರ್ಮಾನದಿಂದ, ನಿಮ್ಮ ಪಕ್ಷದ ನಾಯಕರ ಮಾತಿಗಾದರೂ ಬೆಲೆ ಕೊಡಿ ಇಲ್ಲವಾದರೆ ನಿಮ್ಮ ಪಕ್ಷ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ ಎಂದರು. ಆದ್ರೆ ಯಾವುದಕ್ಕೂ ಜಗ್ಗದ ರಘು ಆಚಾರ್ ಧರಣಿ ಮುಂದುವರೆಸಿದ್ದಾರೆ.