ಬೆಂಗಳೂರು:ಇಡೀ ವಿಶ್ವದಲ್ಲಿ ಎಲ್ಲೆಡೆ ಕೊರೊನಾ ಸೋಂಕು ತಡೆಗಟ್ಟಲು ನಾನಾ ಅಧ್ಯಯನ, ಪ್ರಯೋಗಗಳು ನಡೆಯುತ್ತಲೇ ಇವೆ. ಇದೀಗ ಸಿಲಿಕಾನ್ ಸಿಟಿಯ ವೈದ್ಯರೊಬ್ಬರು ಕ್ಯಾನ್ಸರ್ಗೆ ಬಳಸುವ ರೇಡಿಯೋ ಥೆರಪಿಯನ್ನು ಕೊರೊನಾ ಚಿಕಿತ್ಸೆಗೆ ಬಳಸಲು ಮುಂದಾಗಿದ್ದಾರೆ.
ಕೊರೊನಾ ಸೋಂಕಿತರಿಗೆ ಹೊಸ ಮಾದರಿಯ ಚಿಕಿತ್ಸೆಗೆ ಚಿಂತನೆ ನಡೆದಿದ್ದು, ವೈದ್ಯರಿಂದ Low Doze Radio Therapy ಪ್ರಯೋಗ ನಡೆಯಲಿದೆ. ನಗರದ ಹೆಚ್ಸಿಜಿ ಆಸ್ಪತ್ರೆಯ ವತಿಯಿಂದ ಈ ವಿನೂತನ ಪ್ರಯೋಗ ನಡೆಯಲಿದ್ದು, ಥೆರಪಿ ಬಗ್ಗೆ ಈಗಾಗಲೇ ವೈದ್ಯರ ತಂಡ ಅಧ್ಯಯನವನ್ನು ನಡೆಸಿದೆ.
ಶೇಕಡಾ 85 ರಿಂದ 90 ಭಾಗ ಈ ಥೆರಪಿ ಸಕ್ಸಸ್ ಆಗಲಿದೆಯಂತೆ. ಥೆರಪಿ ಯಶಸ್ಸು ಕಂಡಿಲ್ಲಾ ಎಂದರೂ ಅಡ್ಡ ಪರಿಣಾಮ ಇರಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಕ್ಯಾನ್ಸರ್ ಖಾಯಿಲೆಗೆ ರೇಡಿಯೋ ಥೆರಪಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗಾಗಿ ಕೊರೊನಾಗೂ ಕಡಿಮೆ ವಿಕಿರಣ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿದ್ದಾರೆ.