ಕರ್ನಾಟಕ

karnataka

ETV Bharat / state

​​​​​​​ನವೆಂಬರ್​ನಲ್ಲಿ ಸೆಟ್ಟೇರಲಿದೆ ಡಿಂಪಲ್ ಕ್ವೀನ್ ರಚಿತ ರಾಮ್ ನಟನೆಯ ಪಂಥ - ನಾಗೇಂದ್ರ ಪ್ರಸಾದ್ ನಿರ್ದೇಶನದ ಪಂಥ ಚಿತ್ರ

ಖ್ಯಾತ ಗೀತ ರಚನೆಕಾರ, ನಿರ್ದೇಶಕ ನಾಗೇಂದ್ರ ಪ್ರಸಾದ್​ ನಿರ್ದೇಶನದ ಪಂಥ ಚಿತ್ರ ನವೆಂಬರ್​ನಲ್ಲಿ ಸೆಟ್ಟೇರಲಿದೆ. ಮೊದಲ ಭಾರಿಗೆ  ವಸಿಷ್ಠ ಸಿಂಹ ಜೊತೆ ತೆರೆ ಮೇಲೆ ಕಾಣಿಸಲಿದ್ದಾರೆ.

ನಿರ್ದೇಶಕ ನಾಗೇಂದ್ರ ಪ್ರಸಾದ್, ನಟಿ ರಚಿತ ರಾಮ್ ಹಾಗೂ ನಟ ವಸಿಷ್ಠ

By

Published : Oct 25, 2019, 11:14 AM IST

ಬೆಂಗಳೂರು: ಕನ್ನಡದ ಜನಪ್ರಿಯ ಹಾಗೂ ಅದೃಷ್ಟದ ನಟಿ ರಚಿತಾ ರಾಮ್ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳಲ್ಲಿ ಗತ್ತು ಇರಬೇಕು, ಅಭಿನಯಿಸಲು ಅವಕಾಶ ಇರಬೇಕು ಎಂದು ಡಿಂಪಲ್ ಕ್ವೀನ್ ಮೊದಲಿಂದಲೂ ಅಂತಹ ಕತೆ ಇರುವ ಸಿನಿಮಾಗಳನ್ನು ರೂಢಿಸಿಕೊಂಡು ಬಂದಿದ್ದಾರೆ.

ನಿರ್ದೇಶಕ ನಾಗೇಂದ್ರ ಪ್ರಸಾದ್, ನಟಿ ರಚಿತ ರಾಮ್ ಹಾಗೂ ನಟ ವಸಿಷ್ಠ

ನಿರ್ದೇಶಕ, ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಅವರ ‘ಪಂಥ ಚಿತ್ರದಲ್ಲಿ ರಚಿತ ರಾಮ್ ಮೊದಲ ಭಾರಿಗೆ ವಸಿಷ್ಠ ಎನ್ ಸಿಂಹ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಡಿಬೇಟ್ ಆನ್ ದಿ ಬೆಟ್’ ಎಂಬ ಉಪ ಶೀರ್ಷಿಕೆ ಇರುವ ಚಿತ್ರ ಇದಾಗಿದ್ದು ನವೆಂಬರ್​ನಲ್ಲಿ ಸೆಟ್ಟೇರುವ ವಿಶ್ವಾಸವನ್ನು ಚಿತ್ರ ನೀಡಿದೆ.

ನನ್ನ ನಿನ್ನ ಅಂತರಂಗ, ನಿನ್ನ ನನ್ನ ಬಹಿರಂಗ ಎಚ್ಚರ ಇರಬೇಕು ಹಾಡನ್ನು ನಾಗೇಂದ್ರ ಅವರ ಕಲ್ಪನಾ ಲಹರಿಯಲ್ಲಿ ಮೂಡಿ ಬಂದಿದ್ದ್ದು, ಎನ್.ಶ್ರೀಧರ್ ಮತ್ತು ಎಲ್.ಅಶ್ವಥ್ ನಾರಾಯಣ್ ಜಂಟಿ ನಿರ್ಮಾಣದಲ್ಲಿ ‘ಪಂಥ’ ಚಿತ್ರ ಸಜ್ಜಾಗುತ್ತಿದೆ.

ತಾಂತ್ರಿಕ ವರ್ಗದಲ್ಲಿ ಸಿ.ವೈರೋಜ್ ಪಾಶಾ, ಸಾಮ್ರಾಟ್ (ನಾಗರಾಜ್), ಕೆ ಎಂ ಪ್ರಕಾಶ್, ಉಪ್ಪಿ, ರಾಜಗುರು ಹೊಸಕೋಟೆ, ಮಹಾದೇವ ಸ್ವಾಮಿ, ರಾಜು, ರಘು ಜೊತೆಯಾಗಿದ್ದಾರೆ.

ABOUT THE AUTHOR

...view details