ಕರ್ನಾಟಕ

karnataka

ETV Bharat / state

ಸಾವಿನಲ್ಲೂ ಸಾರ್ಥಕತೆ ಮೆರೆದ ಆರ್. ಜೆ. ರಚನಾ - Rachana parents ready to donates her orgens

ರಚನಾ ಸಾವಿನ ಬಳಿಕ ಅಂಗಾಂಗ ದಾನ ಮಾಡಲು ಅವರ ಕುಟುಂಬಸ್ಥರು ಮುಂದಾಗಿದ್ದಾರೆ. ಮುಂಜಾನೆ ಹೃದಯಘಾತವಾಗಿದ್ದ ಕಾರಣ ಅಪೋಲೊ ಆಸ್ಪತ್ರೆಯಲ್ಲೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೆರೆದ ಅರ್ ಜೆ ರಚನಾ
ಸಾವಿನಲ್ಲೂ ಸಾರ್ಥಕತೆ ಮೆರೆದ ಅರ್ ಜೆ ರಚನಾ

By

Published : Feb 22, 2022, 4:11 PM IST

ಬೆಂಗಳೂರು: ತೀವ್ರ ಹೃದಯಾಘಾತದಿಂದ ನಿಧನ ಹೊಂದಿರುವ ಆರ್ ಜೆ ರಚನಾ (39) ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ರಚನಾ ಸಾವಿನ ಬಳಿಕ ಅಂಗಾಂಗ ದಾನ ಮಾಡಲು ಅವರ ಕುಟುಂಬಸ್ಥರು ಮುಂದಾಗಿದ್ದಾರೆ. ಮುಂಜಾನೆ ಹೃದಯಘಾತವಾಗಿದ್ದ ಕಾರಣ ಅಪೋಲೋ ಆಸ್ಪತ್ರೆಯಲ್ಲೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು 12 ಗಂಟೆ ವೇಳೆಗೆ ರಚನಾ ತಮ್ಮ ಮಾತು ನಿಲ್ಲಿಸಿದ್ದಾರೆ.

ಇದನ್ನೂ ಓದಿ: ಪಟ ಪಟ ಅಂತಾ ಮಾತನಾಡುತ್ತಿದ್ದ ರೇಡಿಯೋ ಜಾಕಿ ರಚನಾ ಇನ್ನಿಲ್ಲ..

ತಮ್ಮ ಕಂಠ ಸಿರಿಯಿಂದಲೇ ಹೆಸರುವಾಸಿ ಆಗಿದ್ದ ಇವರು ಕೆಲ ದಿನಗಳಿಂದ ಮಾನಸಿಕ ನೋವಿನಿಂದ ಬಳಲುತ್ತಿದ್ದರು ಎಂಬುದು ಅವರ ಸ್ನೇಹಿತರ ಅಭಿಪ್ರಾಯ. ರೇಡಿಯೋ ಮಿರ್ಚಿ ಮೂಲಕ ಅವರು ತಮ್ಮ ರೇಡಿಯೋ ಜಾಕಿ ಪಯಣ ಆರಂಭಿಸಿ ನಂತರ ರೇಡಿಯೋ ಸಿಟಿ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ಈ ಕೆಲಸದಿಂದ ದೂರವೇ ಉಳಿದಿದ್ದರು.

For All Latest Updates

ABOUT THE AUTHOR

...view details