ಕರ್ನಾಟಕ

karnataka

ETV Bharat / state

ಕ್ರಿಶ್ಚಿಯನ್​ನಿಂದ ಮತಾಂತರ ಆಗುತ್ತೆ ಅಂತ ಭಾವಿಸಿದ್ದೆವು, ಆದರೆ ಮುಸ್ಲಿಂ ಮತಾಂತರ ಆಗಿದೆ: ಸಚಿವ ಆರ್.ಅಶೋಕ್ - ಈಟಿವಿ ಭಾರತ ಕನ್ನಡ

ಬೆಂಗಳೂರಿನಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಬಳಿಕ ಮೊದಲ ಬಾರಿಗೆ ಪ್ರಕರಣ ದಾಖಲಾಗಿದೆ. ಯುವತಿಗೆ ಮದುವೆ ಆಸೆ ತೋರಿಸಿ ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆರ್​ ಅಶೋಕ್​ ಪ್ರತಿಕ್ರಿಯಿಸಿದ್ದು ಕ್ರಿಶ್ಚಿಯನ್​ನಿಂದ ಮತಾಂತರ ಆಗುತ್ತೆ ಅಂತ ಭಾವಿಸಿದ್ದೆವು. ಆದರೆ, ಮುಸ್ಲಿಂ ಮತಾಂತರ ಆಗುತ್ತಿದೆ ಎಂದಿದ್ದಾರೆ.

R Ashoka reaction about conversion issue registered in  Bangalore
ಸಚಿವ ಆರ್.ಅಶೋಕ್

By

Published : Oct 14, 2022, 3:47 PM IST

ಬೆಂಗಳೂರು: ಕ್ರಿಶ್ಚಿಯನ್​ನಿಂದ ಮತಾಂತರ ಆಗುತ್ತೆ ಅಂತ ಎಲ್ಲಾ ಭಾವಿಸಿದ್ದೆವು. ಆದರೆ, ಮುಸ್ಲಿಂ ಮತಾಂತರ ಕಂಡು ಬಂದಿದೆ ಎಂದು ಮತಾಂತರ ನಿಷೇಧ ಕಾಯ್ದೆ ಜಾರಿ ನಂತರ ಬೆಳಕಿಗೆ ಬಂದ ಮೊದಲ ಪ್ರಕರಣ ಕುರಿತು ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಂಡ್ಯದ ಹಿಂದೂ ವ್ಯಕ್ತಿಯ ಅಕೌಂಟಿಗೆ ಹಣಹಾಕಿ ಮತಾಂತರ ಮಾಡಲಾಗಿದೆ. ಬೇರೆ ಬೇರೆ ಕಡೆ ಕರೆದುಕೊಂಡು ಹೋಗಿ, ಶಿವ, ಬನಶಂಕರಿ ಎಲ್ಲ ದೇವರು ಒಳ್ಳೆಯವರಲ್ಲ ಅಂತ ಹೇಳಿದ್ದಾರೆ. ಮುಸ್ಲಿಂಗೆ ಮತಾಂತರ ಆದರೆ, ದೇವರು ಮನೆಯಲ್ಲೇ ಪ್ರತ್ಯಕ್ಷ ಆಗ್ತಾರೆ ಅಂತ ಪ್ರಚೋದನೆ ಮಾಡಿದ್ದಾರೆ ಎಂದು ತಿಳಿಸಿದರು.

ಮೂರು ಜನರಿಗೆ ಎಲ್ಲಾ ರೀತಿಯಟ್ರೈನಿಂಗ್ ಕೊಟ್ಟಿದ್ದಾರೆ. ಅಲ್ಲದೆ ದನದ ಮಾಂಸ ತಿನ್ನಲು ಬಲವಂತ ಮಾಡಿದ್ದಾರೆ, ತಿನ್ನಲ್ಲ ಅಂದಿದ್ದಕ್ಕೆ ಟಾರ್ಚರ್ ಮಾಡಿದ್ದಾರೆ. ಬನಶಂಕರಿಯಲ್ಲಿರೋ ಕಬರ್ಸ್ತಾನ್​ಗೆ ಕರೆದೊಯ್ದು ಟಾರ್ಚರ್ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧನ ಆಗಿರೋದು ಕಾಂಗ್ರೆಸ್ ಕಾರ್ಪೊರೇಟರ್. ಎರಡು ಬಾರಿ ಕಾರ್ಪೊರೇಟರ್ ಆಗಿದ್ದರು. ಪೊಲೀಸರು ಮೂವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ‌ ಎಂದರು.

ರಾಜ್ಯದಲ್ಲಿ ಸುರಿಯುತ್ತಿರೋ ಮಳೆ, ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಹಣ ಬಿಡುಗಡೆಯಾಗಿದೆ. ಕಂದಾಯ ಇಲಾಖೆಯಿಂದ ಹಣ ಬಿಡುಗಡೆ ಆಗುತ್ತಿದೆ. 124 ಕೋಟಿ ಮೂಲ ಸೌಕರ್ಯ ಹಾನಿಯಾಗಿರೋದಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಮತಾಂತರ ನಿಷೇಧ ಕಾಯ್ದೆ ಜಾರಿ ಬಳಿಕ ಮೊದಲ ಪ್ರಕರಣ ದಾಖಲು: ಯುವತಿಗೆ ಮದುವೆ ಆಸೆ ತೋರಿಸಿ ಇಸ್ಲಾಂಗೆ ಮತಾಂತರ ಆರೋಪ

ABOUT THE AUTHOR

...view details