ಬೆಂಗಳೂರು :ಆರ್‌ಎಸ್‌ಎಸ್ ಬಗ್ಗೆ ಮಾತಾಡಿದರೆ ಹುಷಾರ್..! ಪ್ಯಾಂಟೂ, ಚಡ್ಡಿ ಸುಡೋದನ್ನೆಲ್ಲ ಬಿಟ್ಟು ಬಿಡಿ. ಆರ್‌ಎಸ್‌ಎಸ್ ತಂಟೆಗೆ ಬಂದರೆ ಸುಟ್ಟು ಹೋಗ್ತೀರಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ಸುಡೋರೆಲ್ಲ ಮನೆ ಸುಟ್ಟುಕೊಂಡಿದ್ದಾರೆ. ಆಂಜನೇಯನ ಬಾಲಕ್ಕೆ ಬೆಂಕಿ ಬಿದ್ದು, ಇಡೀ ಲಂಕೆಯೇ ಸುಟ್ಟು ಹೋಯಿತು. ಆರ್‌ಎಸ್‌ಎಸ್ ಶಕ್ತಿ ಏನು ಎಂದು ಪ್ರಪಂಚಕ್ಕೆ ಗೊತ್ತಿದೆ. ಸ್ವಲ್ಪ ಹುಷಾರಾಗಿರಿ.
ನೀವೇ ಬಾದಾಮಿಯಲ್ಲಿ ಸ್ವಲ್ಪ ಅಂತರದಿಂದ ಗೆದ್ದಿದ್ದೀರಿ. ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಕ್ಷೇತ್ರ ಹುಡುಕ್ತಿದ್ದೀರಿ. ಅಂತದ್ದರಲ್ಲಿ ಈಗ ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡಿದರೆ, ನೀವು ಚುನಾವಣೆಯಲ್ಲೂ ಸೋಲ್ತಿರಿ. ಕೇವಲ ಸೋನಿಯಾ ಗಾಂಧಿ ಮೆಚ್ಚಿಸಲು ಹೋಗಿ, ನೀವು ಚುನಾವಣೆಯಲ್ಲಿ ಸುಟ್ಟು ಹೋಗ್ತಿರಿ ಹುಷಾರ್! ಎಂದು ಸಿದ್ದರಾಮಯ್ಯಗೆ ಎಂದರು.