ಕರ್ನಾಟಕ

karnataka

ETV Bharat / state

ಮತ್ತೆ ಮಳೆ ಆರ್ಭಟ, ಸಮರೋಪಾದಿಯಲ್ಲಿ ಪರಿಹಾರಕ್ಕೆ ಕ್ರಮ‌ : ಸಚಿವ ಆರ್.ಅಶೋಕ್ ಘೋಷಣೆ - ಪ್ರವಾಹ ಪರಿಹಾರ ಸುದ್ದಿ

ರಾಜ್ಯದಲ್ಲಿ ಎರಡನೇ ಬಾರಿಗೆ ಪ್ರವಾಹ ಉಂಟಾಗಿದ್ದು, ಸರ್ಕಾರ ಪ್ರವಾಹ ಪರಿಹಾರ ಕಾರ್ಯಕ್ಕೆ ಸನ್ನದ್ಧವಾಗಿದೆ. ಪ್ರವಾಹ ಪೀಡಿತರಿಗೆ ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಹಾಗೂ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ನೆರೆ ಪೀಡಿತ ಸ್ಥಳಗಳಿಗೆ ಭೇಟಿ ನೀಡುವಂತೆ ಹೇಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಕಂದಾಯ ಸಚಿವ ಆರ್. ಅಶೋಕ್ ಸುದ್ದಿಗೋಷ್ಠಿ

By

Published : Oct 22, 2019, 5:42 PM IST

Updated : Oct 22, 2019, 6:15 PM IST

ಬೆಂಗಳೂರು :ರಾಜ್ಯದಲ್ಲಿ ಮತ್ತೊಮ್ಮೆ‌ ಪ್ರವಾಹ ಎದುರಾಗಿದ್ದು, ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಬೆಳಗಾವಿ, ಕೊಪ್ಪಳ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಧಾರವಾಡ, ಹಾವೇರಿ, ಉಡುಪಿ, ಉ.ಕನ್ನಡ, ಶಿವಮೊಗ್ಗ, ದ.ಕನ್ನಡ, ಮಂಡ್ಯ ದಲ್ಲಿ ಭಾರಿ ಮಳೆಯಿಂದ ಸುಮಾರು 5,444 ಮನೆಗಳು ಹಾನಿಗೀಡಾಗಿವೆ ಎಂದರು.

ಬೆಳಗಾವಿಯಲ್ಲಿ ಒಟ್ಟು ಸಾವಿರ ಮನೆ, ದಾವಣಗೆರೆ 210, ಬಾಗಲಕೋಟೆ 600, ಚಿತ್ರದುರ್ಗ 180, ಧಾರವಾಡ 1814, ಹಾವೇರಿ 1513, ಉಡುಪಿ 2, ಶಿವಮೊಗ್ಗ 92, ಉತ್ತರ ಕನ್ನಡ 10, ದ.ಕನ್ನಡ 23 ಮನೆಗಳು ಹಾನಿಗೀಡಾಗಿವೆ ಎಂದು ತಿಳಿಸಿದರು.

ಕಂದಾಯ ಸಚಿವ ಆರ್. ಅಶೋಕ್ ಸುದ್ದಿಗೋಷ್ಠಿ

ಮಳೆ ಆರ್ಭಟಕ್ಕೆ 12 ಸಾವು:ಮಳೆಯ ಆರ್ಭಟಕ್ಕೆ ಸುಮಾರು 12 ಮಂದಿ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ. ಬೆಳಗಾವಿಯಲ್ಲಿ 2, ಕೊಪ್ಪಳ 4, ರಾಯಚೂರು 1, ಬಾಗಲಕೋಟೆ 1, ಧಾರವಾಡ 1, ಮಂಡ್ಯ 1, ಹಾವೇರಿ 2 ಮಂದಿ ಸಾವಿಗೀಡಾಗಿದ್ದಾರೆ. ಮೃತರಿಗೆ ಐದು ಲಕ್ಷ ರೂ. ಪರಿಹಾರ ಧನ ನೀಡಲು ಸೂಚನೆ ನೀಡಿದ್ದೇನೆ. ಸಮಾರು 45 ಜಾನುವಾರು ಮೃತಪಟ್ಟಿವೆ . ಒಟ್ಟು 12 ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, 2176 ಸಂತ್ರಸ್ತರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿಗಳಿಗೆ ಸೂಚನೆ:ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ನೆರೆ ಪೀಡಿತ ಸ್ಥಳಗಳಿಗೆ ಹೋಗಿ ಭೇಟಿ ನೀಡಿ, ಅಲ್ಲಿನ ಕಾಳಜಿ ಕೇಂದ್ರಗಳಿಗೆ ಹೋಗುವಂತೆ ನಿರ್ದೇಶನ ನೀಡಲಾಗಿದೆ‌. ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಲಾಗಿದ್ದು, ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಹಾಗೂ ನಾನು ಬೆಳಗಾವಿ ಮತ್ತು ಯಾದಗಿರಿ ಜಿಲ್ಲೆಗೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದರು.

ನೆರೆ ಪರಿಹಾರ ಸಂಬಂಧ ಯಾವುದೇ ರೀತಿಯ ಹಣದ ಕೊರತೆ ಇಲ್ಲ. ತುಮಕೂರು ಹಾಗೂ ವಿಜಯಪುರ ಜಿಲ್ಲಾಧಿಕಾರಿ ಖಾತೆಯಲ್ಲಿ ಹಣ ಕಡಿಮೆ ಇತ್ತು. ಕೂಡಲೇ ಹಣ ಬಿಡುಗಡೆ ಮಾಡಲಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರಕ್ಕೆ ಎರಡನೇ ಬಾರಿ ಸಂಭವಿಸಿರುವ ನೆರೆ ಹಾನಿ ಸಂಬಂಧ ವರದಿ ಸಲ್ಲಿಸಲಿದ್ದೇವೆ ಎಂದೂ ಇದೇ ವೇಳೆ ಮಾಹಿತಿ ನೀಡಿದರು.

Last Updated : Oct 22, 2019, 6:15 PM IST

ABOUT THE AUTHOR

...view details