ಕರ್ನಾಟಕ

karnataka

ETV Bharat / state

ವಿಪಕ್ಷಗಳ ಸಭೆ ಬರೇ ಫೋಟೋ ಶೋ ಅಷ್ಟೇ, ಎಲ್ಲರೂ ಕೈ ಎತ್ತಿ ಹೋಗ್ತಾರೆ: ಆರ್ ಅಶೋಕ್ - etv bharat kannada

ವಿಪಕ್ಷಗಳ ಸಭೆ ಕೇವಲ ಫೋಟೋ ಶೋ ಅಷ್ಟೇ ಎಂದು ಮಾಜಿ‌ ಸಚಿವ ಆರ್​ ಅಶೋಕ್ ಲೇವಡಿ ಮಾಡಿದ್ದಾರೆ.

ಆರ್.ಅಶೋಕ್
ಆರ್.ಅಶೋಕ್

By

Published : Jul 17, 2023, 12:52 PM IST

ಬೆಂಗಳೂರು: ಮಹಾಘಟಬಂಧನ್​ ಸಭೆ ಕೇವಲ ಫೋಟೋ ಶೋ ಅಷ್ಟೇ. ಎಲ್ಲರೂ ಕೈ ಎತ್ತಿ ಫೋಟೋ ಶೂಟ್ ಮಾಡ್ತಾರೆ, ಹೋಗ್ತಾರೆ ಎಂದು ಮಾಜಿ‌ ಸಚಿವ ಆರ್ ಅಶೋಕ್ ಲೇವಡಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರ ನಡೆಸೋರು ಹೇಗೆ ಅಧಿಕಾರ ದುರುಪಯೋಗ ಮಾಡ್ತಾರೆ ಅನ್ನೋದನ್ನು ನೋಡುತ್ತಿದ್ದೇನೆ. ಇದೊಂದು ಫೋಟೋ ಶೋ ಅಷ್ಟೇ. ದಾರಿಯುದ್ದಕ್ಕೂ ಫ್ಲೆಕ್ಸ್​ಗಳನ್ನು ನೋಡಿದ್ದೇನೆ. ಯುಪಿಎ ಲೀಡರ್ಸ್ ಬೆಂಗಳೂರಿಗೆ ಬಂದಿದ್ದಾರೆ. ಸಿದ್ಧಾಂತಗಳಿಲ್ಲ ಅವರಿಗೆ ಆ ರಾಜ್ಯಗಳಲ್ಲಿ ಒಬ್ಬೊರಿಗೊಬ್ಬರು ಕಚ್ಚಾಡ್ತಾರೆ ಎಂದು ಕಿಡಿಕಾರಿದರು.

ತಮಿಳುನಾಡು, ಕೇರಳ, ವೆಸ್ಟ್ ಬೆಂಗಾಲ್​ನಲ್ಲಿ ಒಬ್ಬೊರಿಗೊಬ್ಬರು ಜಗಳ ಆಡ್ತಾರೆ. ಅವರಿಗೆ ಟಾರ್ಗೆಟ್ ಇಲ್ಲ. ಅವರಿಗೆ ಮೋದಿ ಸೋಲಿಸುವುದೊಂದೇ ಅಜೆಂಡಾ ಇರೋದು. ಮೋದಿ ವಿರುದ್ಧ ನಾವಿದ್ದೇವೆ ಅನ್ನೋದು ಅಷ್ಟೇ ಅವರಿಗೆ ಎಂದು ಟೀಕಿಸಿದರು. ದೇಶದ ಬಡವರಿಗೆ ಮೋದಿ‌ ಏನು ಅಂತ ಗೊತ್ತಿದೆ. ಮೋದಿ ಅವರಿಂದ ಭಾರತಕ್ಕೆ ವಿಶ್ವಮಟ್ಟದಲ್ಲಿ ಹೆಸರು ಬಂದಿದೆ. ಚಂದ್ರಯಾನ 3 ಯಶಸ್ವಿಯಾಗಿದೆ. ಫೋಟೋ ಶೋ, ಸಭೆಯಿಂದ ಏನು ಉಪಯೋಗವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ದೇಶವನ್ನು ಹರಾಜಿಗಿಡೋ ಪ್ರಯತ್ನ ಮಾಡ್ತಿದಾರೆ:ಇದೇ ವೇಳೆ ಮಾತನಾಡಿದ ಬಿಜೆಪಿ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಈ‌ ಮಹಾಘಟನಬಂದನ್ ಯಾವ ಕಾರಣಕ್ಕೆ ಅನ್ನೋದು‌ ಅವರಿಗೇ ಗೊತ್ತಿಲ್ಲ. ಮೋದಿಜಿ ಅವರನ್ನ‌ ಸೋಲಿಸಬೇಕು ಅನ್ನೋ‌ ನಿಟ್ಟಿನಲ್ಲಿ ‌ಸಭೆ ಮಾಡ್ತಿದಾರೆ. ಯುನೈಟೆಡ್ ದಿ ಸ್ಟ್ಯಾಂಡ್ ಎಂಬ ಪೋಸ್ಟ್ ಹಾಕಿದ್ದಾರೆ. ಇಲ್ಲಿ‌ ಸೇರೋ ಎಲ್ಲರೂ‌ ಅವರ ಸಿದ್ಧಾಂತ, ತತ್ವಗಳು ಬೇರೆ. ಹೀಗಿರುವಾಗ ಹೇಗೆ ಒಂದಾಗ್ತಾರೆ? ಎಂದು ಪ್ರಶ್ನಿಸಿದರು.

ಇವರಿಗೆ‌ ನೀತಿ ಸಿದ್ಧಾಂತಗಳೇ‌ ಇಲ್ಲ. ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮೊಹಮ್ಮದ್ ಬರ್ತಿದ್ದಾರೆ, ಅವರ ಸಿದ್ಧಾಂತ ದೇಶ ಒಡೆಯೋದು. ಇವರೆಲ್ಲರೂ ಕುತಂತ್ರ ಮಾಡಲು ಬರುತ್ತಿದ್ದಾರೆ. ಮಳೆಯಲ್ಲಿ‌ ಅಣಬೆಗಳ ರೀತಿ‌ ಹುಟ್ಟುಕೊಂಡಿದ್ದಾರೆ. ಇದೊಂದು ಟೂರ್ ರೀತಿಯಲ್ಲಿ ಬಂದಿದ್ದಾರೆ. ವಿರೋಧ ಪಕ್ಷವಾಗಲು ಯೋಗ್ಯರಿಲ್ಲದವರು ಎಂದು ಕಿಡಿಕಾರಿದರು.

ರಾಹುಲ್ ಗಾಂಧಿ ನೇತೃತ್ವದಲ್ಲಿ ಬರ್ತಿದ್ದಾರೆ. ಅವರು ಸಂಸದರೂ ಅಲ್ಲ, ಅನರ್ಹಗೊಂಡಿದ್ದಾರೆ. ಈ ದೇಶವನ್ನು ಹರಾಜಿಗಿಡೋ ಪ್ರಯತ್ನ ಮಾಡ್ತಿದ್ದಾರೆ. ಅಲ್ಲಿ ವೆಚ್ಚವಾಗುವ ಒಂದೊಂದು ರೂಪಾಯಿಯೂ ಸರ್ಕಾರದ ಖರ್ಚಾಗಿದ್ದರೆ ತಿರುಗಿಬೀಳ್ತೇವೆ. 150 ತಾಲೂಕಿನಲ್ಲಿ ಮಳೆ ಇಲ್ಲ‌‌. ಕುಡಿಯುವ ನೀರು ಇಲ್ಲ. ಅದನ್ನ ನೋಡ್ತಿಲ್ಲ. ನಿಮ್ಮ ಗ್ಯಾರಂಟಿಗಳು ಹಳ್ಳಕ್ಕೆ ಬೀಳ್ತಿವೆ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ?: ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಿಷ್ಟು..

ABOUT THE AUTHOR

...view details