ಕರ್ನಾಟಕ

karnataka

ETV Bharat / state

ನೆರೆ ಹಾನಿ ನಷ್ಟ ಪ್ರಸ್ತಾಪದ ಬಗ್ಗೆ ನನಗೆ ಮಾಹಿತಿ ಇಲ್ಲ: ಆರ್​.ಅಶೋಕ್​​ - ಕಂದಾಯ ಸಚಿವ ಆರ್.ಅಶೋಕ್

ಎಸ್​ಡಿಆರ್​ಎಫ್ ನಿಯಮದ ಅನ್ವಯ 485 ಕೋಟಿ ರೂ. ನಷ್ಟ ವರದಿ ಸಿದ್ಧಪಡಿಸಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಬೆಳೆಹಾನಿ, ವಿದ್ಯುತ್ ಕಂಬಗಳು, ರಸ್ತೆ, ಸೇತುವೆ, ಭೂ ಕುಸಿತದ ಬಗ್ಗೆ ವರದಿ ಬರಬೇಕಿದೆ. ಎಲ್ಲಾ ಇಲಾಖೆಗಳಿಂದ ವರದಿ ಬರಬೇಕು. ಇಲ್ಲಿಯವರೆಗೆ ಇದಕ್ಕೆ ಸಂಬಂಧಿಸಿದ ಯಾವುದೇ ವರದಿ ಬಂದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಆರ್​. ಅಶೋಕ್
ಆರ್​. ಅಶೋಕ್

By

Published : Aug 17, 2020, 4:56 PM IST

ಬೆಂಗಳೂರು: 485 ಕೋಟಿ ನೆರೆ ಹಾನಿ ನಷ್ಟ ಪ್ರಸ್ತಾಪದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಮಾಹಿತಿ ಯಾರಿಂದ ಬಂದಿದೆ ಅನ್ನೋದು ಗೊತ್ತಿಲ್ಲ. ಈ ತರಹ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್​ಡಿಆರ್​ಎಫ್ ನಿಯಮದ ಅನ್ವಯ 485 ಕೋಟಿ ರೂ. ನಷ್ಟ ವರದಿ ಸಿದ್ಧಪಡಿಸಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಬೆಳೆಹಾನಿ, ವಿದ್ಯುತ್ ಕಂಬಗಳು, ರಸ್ತೆ, ಸೇತುವೆ, ಭೂ ಕುಸಿತದ ಬಗ್ಗೆ ವರದಿ ಬರಬೇಕಿದೆ. ಎಲ್ಲಾ ಇಲಾಖೆಗಳಿಂದ ವರದಿ ಬರಬೇಕು. ಅದು ಸುದೀರ್ಘ ಪ್ರಕ್ರಿಯೆ. ಇಲ್ಲಿಯವರೆಗೆ ಇದಕ್ಕೆ ಸಂಬಂಧಿಸಿದ ಯಾವುದೇ ವರದಿ ಬಂದಿಲ್ಲ. ನಮ್ಮ ಇಲಾಖೆಯಿಂದ ಅಪ್ರೂವಲ್ ಆದ್ರೆ ಮಾತ್ರ ಅದು ಅಥೆಂಟಿಕ್ ಎಂದು ಸ್ಪಷ್ಟಪಡಿಸಿದರು.

ಐದು ಇಲಾಖೆಗಳ ವರದಿ ಬಂದ ಮೇಲೆ ಮಾತ್ರ ಅದು ಫೈನಲ್ ಆಗೋದು. ಈ ವರದಿ ಬಗ್ಗೆ ಪ್ರಧಾನ ಕಾರ್ಯದರ್ಶಿ ಅಜುಂ ಪರ್ವೇಜ್​ಗೂ ಮಾಹಿತಿ ಇಲ್ಲ. ನಷ್ಟದ ವರದಿಯನ್ನು ಇಲಾಖೆ ಪ್ರಧಾನ ಕಾರ್ಯದರ್ಶಿ, ಬಳಿಕ ಸಚಿವನಾಗಿ ನಾನು ಅನುಮೋದಿಸಬೇಕು. ಬೆಳಗಾವಿಯಲ್ಲಿ ಮತ್ತೆ ನೆರೆ ಶುರುವಾಗಿದೆ. ಎರಡು ತಿಂಗಳು ಕಾದು ನೋಡಬೇಕು. ಸದ್ಯ 4,000 ಕೋಟಿ ರೂ. ಮುಂಗಡ ಹಣ ಕೊಡಿ ಅಂತ ಕೇಂದ್ರಕ್ಕೆ ಕೇಳಿದ್ದೆವು. ಕೇಂದ್ರಕ್ಕೆ ಎಲ್ಲಾ ಹಣಕ್ಕೂ ನಾವು ಲೆಕ್ಕ ಕೊಡಬೇಕು ಎಂದು ತಿಳಿಸಿದರು.

ಕೆಳ‌ಮಟ್ಟದ ಅಧಿಕಾರಿಗಳು ಈ ನಷ್ಟದ ವರದಿಯನ್ನು ಮಾಡಿರಬಹುದು. ಆದರೆ ಅದು ಯಾರ ಗಮನಕ್ಕೂ ಬಂದಿಲ್ಲ. ಆ ನಷ್ಟದ ವರದಿ ಅಂತಿಮವಲ್ಲ. ಹೀಗಾಗಿ ಪ್ರಧಾನ‌ ಕಾರ್ಯದರ್ಶಿಗೆ ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡುತ್ತೇನೆ ಎಂದರು.

ಕೋವಿಡ್ ಅನುದಾನ ಬಿಡುಗಡೆ: ಕೋವಿಡ್ ನಿಯಂತ್ರಣ ಸಂಬಂಧ 85.10 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಎಲ್ಲಾ ಮೂವತ್ತು ಜಿಲ್ಲೆಗಳಿಗೆ ಹಣ‌ ಬಿಡುಗಡೆ ಮಾಡಲಾಗಿದೆ. ಆ. 14ರಂದು ಹಣ ಬಿಡುಗಡೆ ಮಾಡಿದ್ದೇವೆ‌ ಎಂದು ತಿಳಿಸಿದರು.

ABOUT THE AUTHOR

...view details