ದೇವನಹಳ್ಳಿ :ಆರ್ ಆರ್ ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಹಣ ಹಂಚಿಕೆ ಬಗ್ಗೆ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್ ಅಶೋಕ್, ಈ ದೇಶದಲ್ಲಿ ಚುನಾವಣೆ ವ್ಯವಸ್ಥೆ ಒಂದು ವೇಳೆ ಹಾಳಾಗಿದ್ದಾರೆ ಅದಕ್ಕೆ ಮೂಲ ಕಾರಣ ಕಾಂಗ್ರೆಸ್. ದೇಶದಲ್ಲಿ ಹಣ ಮತ್ತು ಹೆಂಡ ಮೊದಲಿಗೆ ಹಂಚಿದ್ದು ಕಾಂಗ್ರೆಸ್ ಎಂದು ಕಿರಿಕಾರಿದ್ದಾರೆ.
ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ನಡೆದ 65 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕಂದಾಯ ಸಚಿವ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ಥಳಿ ನಡೆಸಿದರು. ಆರ್ ಆರ್ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಹಣ ಹಂಚಿಕೆ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದರು. ಸಿದ್ದರಾಮಯ್ಯನವರ ಹೇಳಿಕೆ ತಿರುಗೇಟು ನೀಡಿದ ಆರ್ ಅಶೋಕ್, ಹಣ ಹೆಂಡ ಹಂಚಿ ಚುನಾವಣೆ ಗೆಲ್ಲುವುದು ಕಾಂಗ್ರೆಸ್ ಪಕ್ಷಕ್ಕೆಅಭ್ಯಾಸವಾಗಿದೆ ಎಂದಿದ್ದಾರೆ.
ದೇಶದಲ್ಲಿ ಮೊದಲು ಹಣ, ಹೆಂಡದ ಸಂಸ್ಕೃತಿ ತಂದಿದ್ದು ಕಾಂಗ್ರೆಸ್, ಇಡೀ ಚುನಾವಣಾ ವ್ಯವಸ್ಥೆ ಹಾಳಾಗಿದ್ರೆ ಅದಕ್ಕೆ ಮೂಲ ಪುರುಷರು ಕಾಂಗ್ರೆಸ್ನವರು. ಬಹಳ ವರ್ಷಗಳ ಹಿಂದೆಯೇ ಇವರ ಅನಾಚಾರ ಸಂಸ್ಕೃತಿ ಬಯಲಿಗೆ ಬಂದಿದೆ.