ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸರ್ಕಾರ ಸ್ಥಾಪಿಸುವ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಳ್ಳದೇ ಇರುವವರಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆಯನ್ನು ಒಳಗೊಂಡ ಕಾಳಜಿ ಕಿಟ್ ಗಳನ್ನು ವಿತರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರವಾಹದ ಸಂದರ್ಭದಲ್ಲಿ ಸರ್ಕಾರ ಸ್ಥಾಪಿಸುವ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಳ್ಳುವ ಬದಲು ಹಲವರು ಸ್ನೇಹಿತರು, ಬಂಧುಗಳ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಹೀಗಾಗಿ ಅಂತವರಿಗೂ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಸಕ್ಕರೆ ಸೇರಿದಂತೆ ಸಾವಿರ ರೂ. ಮೌಲ್ಯದ ಕಾಳಜಿ ಕಿಟ್ ಗಳನ್ನು ಒದಗಿಸಲಾಗುವುದು ಎಂದರು.
ಪ್ರತಿ ಕಿಟ್ ನಲ್ಲಿ ಸಾವಿರ ರೂ. ಮೌಲ್ಯದ ದಿನೋಪಯೋಗಿ ವಸ್ತುಗಳಿರುತ್ತವೆ. ನೆಂಟರು, ಸ್ನೇಹಿತರ ಮನೆಗಳಲ್ಲಿ ಉಳಿದುಕೊಂಡವರು ಅವರಿಗೂ ಭಾರವಾಗಬಾರದು ಮತ್ತು ಅ ಮೂಲಕ ಪ್ರವಾಹ ಸಂತ್ರಸ್ತರಿಗೆ ತಾವು ಅನಾಥರು ಎಂಬ ಭಾವನೆ ಬರಬಾರದು ಎಂಬುದು ಕಿಟ್ ನೀಡುವ ಉದ್ದೇಶ ಎಂದು ವಿವರಿಸಿದರು.
ಕನಿಷ್ಠ ಹತ್ತು ದಿನಗಳಿಗೆ ಆಗುವಷ್ಟು ಆಹಾರ ಪದಾರ್ಥಗಳನ್ನು ಈ ಕಿಟ್ ಗಳು ಒಳಗೊಂಡಿರುತ್ತವೆ ಎಂದ ಅವರು, ಸರ್ಕಾರದ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಂಡು ಮರಳಿ ಮನೆಗೆ ಹೋಗುವವರಿಗೂ ಈ ಕಿಟ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
21 ಜಿಲ್ಲೆಯಲ್ಲಿ ಪ್ರವಾಹ :ರಾಜ್ಯದ 21 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಕಂಡು ಬಂದಿದ್ದು, ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಅದೇ ರೀತಿ ಬೆಳೆಹಾನಿಗೆ ಸಂಬಂಧಿಸಿದಂತೆ ನೀಡಲಾಗುವ ಪರಿಹಾರ ಧನದ ಪ್ರಮಾಣವನ್ನು ಈ ವರ್ಷದ ಮಟ್ಟಿಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.
ಕಳೆದ ಸಾಲಿಗೆ ಸಂಬಂಧಿಸಿದಂತೆ 2,445 ಕೋಟಿ ರೂ. ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ನಾವು ಕೂಡಾ ದೇಶದ ಎಲ್ಲ ರಾಜ್ಯಗಳಿಗಿಂತ ಹೆಚ್ಚು ಪ್ರಮಾಣದ ಪರಿಹಾರವನ್ನು ಸಂತ್ರಸ್ತರಿಗೆ ನೀಡುತ್ತೇವೆ ಎಂದು ಸಚಿವರು ತಿಳಿಸಿದರು.
ವಲಸಿಗರಿಗೆ ಹಕ್ಕುಪತ್ರ : 60 ವರ್ಷಗಳ ಹಿಂದೆ ಕೆ.ಆರ್.ಎಸ್ ಆಣೆಕಟ್ಟು ಕಟ್ಟಲು ರಾಜ್ಯಕ್ಕೆ ಬಂದ ಏಳುನೂರಕ್ಕೂ ಹೆಚ್ಚು ಮಂದಿ ಶ್ರೀರಂಗಪಟ್ಟಣ ತಾಲೂಕಿನಲ್ಲಿದ್ದು, ಅವರು ಹಾಲಿ ವಾಸವಾಗಿರುವ ಭೂಮಿಯ ಹಕ್ಕು ಪತ್ರ ನೀಡಲು ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ರಾಜ್ಯದಲ್ಲಿ ಅತೀವೃಷ್ಟಿ/ಪ್ರವಾಹ ಪರಿಸ್ಥಿತಿಗಳಿಂದ ಉಂಟಾದ ನಷ್ಟದ ವಿವರ (ಜೂನ್ 1 ರಿಂದ ಆಗಸ್ಟ್ 7 ರವರಗೆ ) ಈ ಕೆಳಕಂಡಂತಿದೆ.
- 1. ಅತಿವೃಷ್ಟಿ/ಪುವಾಹ ಪೀಡಿತ ಒಟ್ಟು ಜಿಲ್ಲೆಗಳು: 14
- 2. ಅತಿವೃಷ್ಟಿ /ಪವಾಹ ಪೀಡಿತ ಒಟ್ಟು ಗ್ರಾಮಗಳು: 161
- 3.ಅತಿವೃಷ್ಟಿ /ಪ್ರವಾಹ ಪೀಡಿತ ಒಟ್ಟು ಜನಸಂಖ್ಯೆ : 21727
- 4. ಅತಿವೃಷ್ಟಿ /ಪ್ರವಾಹ ಪರಿಸ್ಥಿತಿಯಿಂದಾದ ಒಟ್ಟು ಮೃತರು : 73(ಸಿಡಿಲುಬಡಿತ- 15, ಮರಬಿದ್ದು-5, ಮನೆಕುಸಿತದಿಂದ 19, ಪ್ರವಾಹದ ಸೆಳತಕ್ಕೆ ಸಿಲುಕಿ 24, ಭೂಕುಸಿತ-9, ವಿದ್ಯುತ್ ಆಪಘಾತ-1)
- 5. ಅತಿವೃಷ್ಟಿ/ ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಲಾದ ಜನಸಂಖ್ಯೆ: 8,197
- 6. ತೆರೆಯಲಾದ ಒಟ್ಟು ಪರಿಹಾರ ಶಿಬಿರಗಳು : 75
- 7. ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದ ಒಟ್ಟು ಸಂತ್ರಸ್ತರು: 7,386
- 8. ಮನೆ ಹಾನಿ ವಿವರ: ಸಂಪೂರ್ಣ/ಪೂರ್ಣಹಾನಿ- 666, ತೀವ್ರ ಹಾನಿ - 2,949, ಬಾಗಶ: ಹಾನಿ - 17,750
- 9.ದೊಡ್ಡ ಜಾನುವಾರುಗಳು- 204 ಸಣ್ಣ ಜಾನುವಾರುಗಳು- 305.
- 10. ಬೆಳೆಹಾನಿ ಪ್ರಕರಣ : 1,37,029.
- 11. ಮೂಲಭೂತ ಸೌಕರ್ಯ ಹಾನಿಗಳು :