ಬೆಂಗಳೂರು: ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿ ಇರುತ್ತಿದ್ದ ಮಾಜಿ ಡಿಸಿಎಂ ಹಾಗು ಹಾಲಿ ಶಾಸಕ ಆರ್.ಅಶೋಕ್ ಇವತ್ತು ಮಕ್ಕಳೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ವೀಕೆಂಡ್ ಖುಷಿ ಅನುಭವಿಸಿದ್ರು.
ರಾಜಕೀಯ ಚದುರಂಗದಾಟದಿಂದ ರಿಲೀಫ್: ಮಕ್ಕಳ ಜೊತೆ ಅಶೋಕ್ ಗಲ್ಲಿ ಕ್ರಿಕೆಟ್ - kannadanews
ಮಾಜಿ ಡಿಸಿಎಂ ಹಾಗೂ ಹಾಲಿ ಶಾಸಕ ಆರ್. ಅಶೋಕ್ ಮಕ್ಕಳ ಜೊತೆ ಗಲ್ಲಿ ಕ್ರಿಕೆಟ್ ಆಡಿ ವೀಕೆಂಡ್ ಖುಷಿ ಅನುಭವಿಸಿದ್ರು.
ಮಕ್ಕಳ ಜತೆ ಗಲ್ಲಿ ಕ್ರಿಕೆಟ್ ಆಡಿದ ಮಾಜಿ ಡಿಸಿಎಂ
ದೈನಂದಿನ ರಾಜಕೀಯ ಚಟುವಟಿಕೆಗಳಿಂದ ಸ್ವಲ್ಪ ಬಿಡುವು ಮಾಡಿಕೊಂಡ ಶಾಸಕ ಆರ್ ಅಶೋಕ್ ಪದ್ಮನಾಭನಗರದ ಗಣೇಶ ಮಂದಿರ ವಾರ್ಡ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಓಡಾಡಿದರು.
ಇದೇ ವೇಳೆ ಅವರು ಮಕ್ಕಳ ಜತೆ ಗಲ್ಲಿ ಕ್ರಿಕೆಟ್ ಆಡಿದರು. ಬೀದಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ಮಕ್ಕಳ ಜೊತೆಯಲ್ಲಿ ಸೇರಿದ ಮಾಜಿ ಡಿಸಿಎಂ, ಕೊಂಚ ಹೊತ್ತು ತಾವೂ ಬ್ಯಾಟ್ ಬೀಸಿದ್ರು. ಮಕ್ಕಳ ಜತೆ ಮಕ್ಕಳಾಗಿ ಬೌಲಿಂಗ್, ಬ್ಯಾಟಿಂಗ್ ಮಾಡಿ ಗಲ್ಲಿ ಕ್ರಿಕೆಟ್‌ನ ಮಜಾ ಅನುಭವಿಸಿದ್ರು.