ಕರ್ನಾಟಕ

karnataka

ETV Bharat / state

ಸೋಂಕು ನಿಯಂತ್ರಣಕ್ಕೆ ನಗರದಲ್ಲಿ ವೈಮಾನಿಕ ದ್ರಾವಣ ಸಿಂಪಡಣೆಗೆ ಆರ್ ಅಶೋಕ್ ಚಾಲನೆ - Lockdown news

ಮುಂದಿನ ನಿರ್ಧಾರ ಸಿಎಂ ಕೈಗೊಳ್ಳುತ್ತಾರೆ. ನಾವು ಒಮ್ಮೆಲೆ ರಿಲ್ಯಾಕ್ಸೇಷನ್ ಕೊಡಲಾಗುವುದಿಲ್ಲ. ಹಂತ ಹಂತವಾಗಿ ರಿಲ್ಯಾಕ್ಸೇಷನ್ ಕೊಡಿ ಅಂತ ಸಿಎಂಗೆ ನಾವು ಸಲಹೆ ಕೊಟ್ಟಿದ್ದೇವೆ..

R Ashok drives aerial spray in the city for infection control
ಸೋಂಕು ನಿಯಂತ್ರಣಕ್ಕೆ ನಗರದಲ್ಲಿ ವೈಮಾನಿಕ ದ್ರಾವಣ ಸಿಂಪಡಣೆ

By

Published : May 29, 2021, 6:48 PM IST

ಬೆಂಗಳೂರು :ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ಏರಿಯಲ್ ವರ್ಕ್ಸ್ ಏರೋ ಎಲ್​ಎಲ್​​​ಪಿ (Aerialworks Aero LLP) ವತಿಯಿಂದ ಸಾವಯವ ಸೋಂಕು ನಿವಾರಕವನ್ನು ಪ್ರಾಯೋಗಿಕವಾಗಿ ವೈಮಾನಿಕ ಸಿಂಪಡಣೆಗೆ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದ್ದಾರೆ.

ಇಲ್ಲಿನ ಜಕ್ಕೂರು ಏರೋಡ್ರಮ್ ಆವರಣದಲ್ಲಿ ಒಂದು ಲಘು ವಿಮಾನದ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಸೋಂಕು ನಿಯಂತ್ರಣಕ್ಕೆ ನಗರದಲ್ಲಿ ವೈಮಾನಿಕ ದ್ರಾವಣ ಸಿಂಪಡಣೆ

ಬಳಿಕ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಮಾರ್ಕೆಟ್​​​ಗಳಲ್ಲಿ ನಾಳೆಯಿಂದ ದ್ರಾವಣ ಸ್ಪ್ರೇ ಮಾಡಲಾಗುತ್ತದೆ. ಶಿವಾಜಿನಗರ, ಕಲಾಸಿಪಾಳ್ಯ, ಕೆ ಆರ್ ಮಾರ್ಕೆಟ್​​ಗಳಲ್ಲಿ ಸೋಮವಾರದಿಂದ ದ್ರಾವಣ ಸಿಂಪಡಣೆ ಆರಂಭವಾಗುತ್ತದೆ. ಬೆಳಗ್ಗೆ 8-10ರವರೆಗೆ ಆರ್ಗ್ಯಾನಿಕ್ ದ್ರಾವಣ ಸಿಂಪಡಣೆ ಮಾಡಲಾಗುತ್ತದೆ.

ಈ ಪೈಲೆಟ್ ಪ್ರಾಜೆಕ್ಟ್​​ಗೆ ಸರ್ಕಾರ ಯಾವುದೇ ಹಣ ಕೊಡ್ತಿಲ್ಲ. ಪೈಲೆಟ್ ಪ್ರಾಜೆಕ್ಟ್ ಆಗಿದ್ದು, ಫಲಿತಾಂಶ ನೋಡಿಕೊಂಡು ಸರ್ಕಾರ ನಿರ್ಧರಿಸಲಿದೆ. ಇದು ಪರಿಣಾಮಕಾರಿಯಾದರೆ ಅಳವಡಿಕೆ ಮಾಡುತ್ತೇವೆ ಎಂದರು.

ಸೋಂಕು ನಿಯಂತ್ರಣಕ್ಕೆ ನಗರದಲ್ಲಿ ವೈಮಾನಿಕ ದ್ರಾವಣ ಸಿಂಪಡಣೆ

ಇನ್ನು, ಲಾಕ್​ಡೌನ್​ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರ್ತಿದೆ. ಲಾಕ್​ಡೌನ್​ನಿಂದ ಒಳ್ಳೆಯದಾಗಿದೆ. ಜೂನ್ 7ರವರೆಗೆ ಲಾಕ್​ಡೌನ್​ ಜಾರಿಯಲ್ಲಿದೆ.

ಮುಂದಿನ ನಿರ್ಧಾರ ಸಿಎಂ ಕೈಗೊಳ್ಳುತ್ತಾರೆ. ನಾವು ಒಮ್ಮೆಲೆ ರಿಲ್ಯಾಕ್ಸೇಷನ್ ಕೊಡಲಾಗುವುದಿಲ್ಲ. ಹಂತ ಹಂತವಾಗಿ ರಿಲ್ಯಾಕ್ಸೇಷನ್ ಕೊಡಿ ಅಂತ ಸಿಎಂಗೆ ನಾವು ಸಲಹೆ ಕೊಟ್ಟಿದ್ದೇವೆ.

ಜಿಲ್ಲೆಗಳಲ್ಲಿ ಇನ್ನೂ ಸೋಂಕು ತಡೆಗೆ ಬಂದಿಲ್ಲ. ಹಾಗಾಗಿ, ಹಂತ ಹಂತವಾಗಿ ಲಾಕ್​ಡೌನ್ ತೆರವಿನ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದೇವೆ ಎಂದರು.

ABOUT THE AUTHOR

...view details