ಕರ್ನಾಟಕ

karnataka

ಲಾಕ್‌ಡೌನ್ ಇಲ್ಲ, ಬೆಂಗಳೂರಿನಲ್ಲಿ ನಾಳೆಯಿಂದ ಕಠಿಣ ನಿಯಮ ಜಾರಿ

By

Published : Apr 18, 2021, 3:12 PM IST

Updated : Apr 18, 2021, 3:47 PM IST

'ನಾಳೆಯಿಂದ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಕಠಿಣ ಕೋವಿಡ್‌ ನಿಯಮಗಳು ಕಾರ್ಯರೂಪಕ್ಕೆ ಬರಲಿವೆ. ಕೋವಿಡ್ ತಜ್ಞರು ಈ ನಿಯಮಾವಳಿಗಳನ್ನು ಜಾರಿ ಮಾಡಿ ಎಂದಿದ್ದಾರೆ. ಆದರೆ ಜನಸಾಮಾನ್ಯರ ಬದುಕು ನೋಡಬೇಕು. ಆ ದೃಷ್ಟಿಯಿಂದ ಟಫ್ ರೂಲ್ಸ್ ಜಾರಿ ಮಾಡುವ ಬಗ್ಗೆ ನಾಳಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ್
ಕಂದಾಯ ಸಚಿವ ಆರ್.ಅಶೋಕ್

ಬೆಂಗಳೂರು:ಸದ್ಯಕ್ಕೆ ರಾಜ್ಯದಲ್ಲಿ ಲಾಕ್​ಡೌನ್ ಅವಶ್ಯಕತೆ ಇಲ್ಲ. ಸರ್ಕಾರದ ‌ಮುಂದೆಯೂ ಲಾಕ್​ಡೌನ್ ಪ್ರಸ್ತಾವ ಇಲ್ಲ. ಆದರೆ ಬೆಂಗಳೂರಿನಲ್ಲಿ ನಾಳೆ ಟಫ್ ರೂಲ್ಸ್ ಜಾರಿ ಖಚಿತ. ಅದನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್​ಡೌನ್​ನಿಂದ ಈಗಾಗಲೇ ತುಂಬಾ ಸಮಸ್ಯೆ ಆಗಿದೆ. ಹಾಗಾಗಿ ಲಾಕ್​ಡೌನ್ ಹೊರತುಪಡಿಸಿ ಬಿಗಿ ಕ್ರಮ ಜಾರಿಗೊಳಿಸಲಾಗುತ್ತದೆ ಎಂದರು.

ನಾಳೆ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ ಮಾಡುತ್ತೇವೆ. ಕೋವಿಡ್ ತಜ್ಞರು ಟಫ್ ರೂಲ್ಸ್ ಮಾಡಿ ಎಂದಿದ್ದಾರೆ. ಆದರೆ ಜನಸಾಮಾನ್ಯರ ಬದುಕು ನೋಡಬೇಕು. ಈ ಬಗ್ಗೆ ನಾಳಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಲಾಕ್​ಡೌನ್ ಬೇಡ ಅಂತಾ ಸಿಎಂ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ನಾಳೆ ಏನೇ ತೀರ್ಮಾನ ಆದರೂ ಸಿಎಂ ಗಮನಕ್ಕೆ ತರುತ್ತೇನೆ. ಜನರು ಆದಷ್ಟು ಮದುವೆ, ಬೀಗರಕೂಟ, ಬಾಡೂಟಗಳಿಂದ ದೂರ ಇರಬೇಕು ಎಂದರು.

ಇದನ್ನೂ ಓದಿ:ಮಂಗಳೂರು ರೈಲ್ವೆ, ಏರ್​ಪೋರ್ಟ್​ಗಳಲ್ಲಿ ಪಾಲನೆಯಾಗುತ್ತಿವೆಯಾ ಕೋವಿಡ್​ ನಿಯಮಾವಳಿಗಳು?

ನಾನು ರಾಜ್ಯ ವಿಪತ್ತು ನಿರ್ವಹಣೆಯ ಉಪಾಧ್ಯಕ್ಷ, ಅಧ್ಯಕ್ಷರು ಸಿಎಂ ಯಡಿಯೂರಪ್ಪ ಆಗಿದ್ದಾರೆ. ಸಿಎಂ ಆಸ್ಪತ್ರೆಯಲ್ಲಿ ಇರುವ ಕಾರಣ, ನಾನು ಉಪಾಧ್ಯಕ್ಷನಾಗಿ ಸಭೆ ಮಾಡುತ್ತಿದ್ದೇನೆ. ಯಾಕೆಂದರೆ ಕೊರೊನಾ ನಿರ್ವಹಣೆಗೆ ಹಣ ಬಿಡುಗಡೆ ಮಾಡಬೇಕು ಅಂದರೆ ನಾನೇ ಬಿಡುಗಡೆ ಮಾಡಬೇಕು. ಹಣ ಬಿಡುಗಡೆ ಲೆಕ್ಕದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಾನೇ ಮಾಹಿತಿ ಕೊಡಬೇಕು. ಅದಕ್ಕಾಗಿ ನನ್ನ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ ಅಷ್ಟೇ. ಸಿಎಂ ಆದೇಶದ ಮೇರೆಗೆ ನಾನು ಸಭೆ ಮಾಡುತ್ತಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಆರ್​.ಅಶೋಕ್​ ಸ್ಪಷ್ಟಪಡಿಸಿದರು.

Last Updated : Apr 18, 2021, 3:47 PM IST

ABOUT THE AUTHOR

...view details