ಕರ್ನಾಟಕ

karnataka

ETV Bharat / state

ಆಸ್ಪತ್ರೆಯಲ್ಲಿ ಬೆಡ್​ಗೆ ಪರದಾಟ, ಚಿತಾಗಾರದಲ್ಲೂ 'ಹೆಣ'ಗಾಟ: ಬೆಂಗಳೂರಿನಲ್ಲಿ ಪರಿಸ್ಥಿತಿ ಗಂಭೀರ - ಬೆಂಗಳೂರು ಕೋವಿಡ್ ಸುದ್ದಿ

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಚಿತಾಗಾರಗಳ ಮುಂದೆ ಮೃತದೇಹಗಳನ್ನು ಹೊತ್ತು ತಂದ ಆ್ಯಂಬುಲೆನ್ಸ್​ಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

queue for the funeral of Covid infected in Bengaluru
ಶವ ಸಂಸ್ಕಾರಕ್ಕೆ ಸರತಿ ಸಾಲು

By

Published : Apr 21, 2021, 12:06 PM IST

ಬೆಂಗಳೂರು:ರಾಜಧಾನಿಯಲ್ಲಿ ಕೋವಿಡ್ ರೌದ್ರನರ್ತನ ತೋರಿರುವುದರಿಂದ ಬೆಡ್​ ಇಲ್ಲದೆ ಪರದಾಡುತ್ತಿರುವ ಮಧ್ಯೆಯೇ, ಇದೀಗ ಚಿತಾಗಾರದಲ್ಲೂ ಜಾಗವಿಲ್ಲದೆ ಮೃತರ ಕುಟುಂಬಸ್ಥರು ಕಾಯುವ ಪರಿಸ್ಥಿತಿ ಎದುರಾಗಿದೆ.

ಇಂದು ಬೆಳಗ್ಗೆ ನಗರದ ಪೀಣ್ಯ ಚಿತಾಗಾರದಲ್ಲಿ 13 ಆ್ಯಂಬುಲೆನ್ಸ್​ಗಳು ಸಾಲು ಸಾಲುಗಟ್ಟಿ ನಿಂತಿದ್ದು ಕಂಡು ಬಂತು. ನಿನ್ನೆ ರಾತ್ರಿ 2 ಗಂಟೆಯತನಕ ಚಿತಾಗಾರದ ಸಿಬ್ಬಂದಿ ಅಂತ್ಯಸಂಸ್ಕಾರ ನಡೆಸಿದ್ದು, ಬೆಳಗ್ಗಿನ ಪಾಳಿಯಲ್ಲಿ ಮತ್ತೆ ಶವಸಂಸ್ಕಾರ ಪ್ರಾರಂಭವಾಗಿದೆ.

ಇದನ್ನೂ ಓದಿ: ಇಂದಿನಿಂದ ಕೋವಿಡ್‌ ಟಫ್ ರೂಲ್ಸ್ ಜಾರಿ: ಬೆಂಗಳೂರು ಪೊಲೀಸರಿಗೆ ಟಾರ್ಗೆಟ್ ಫಿಕ್ಸ್

ಆ್ಯಂಬುಲೆನ್ಸ್‌ಗಳಲ್ಲಿ ಎರಡೆರಡು ಶವ

ಚಿತಾಗಾರಗಳಲ್ಲಿ ಬಿಡುವಿಲ್ಲದೆ ಹೆಣ ಸುಡುವ ಕಾರ್ಯ ಮಾಡಲಾಗುತ್ತಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವಗಳೇ ಬರುತ್ತಿವೆ. ಒಂದೊಂದು ಆ್ಯಂಬುಲೆನ್ಸ್​ಗಳಲ್ಲಿ ಎರಡೆರಡು ಮೃತದೇಹಗಳನ್ನು ತರಲಾಗ್ತಿದೆ. ಹೀಗಾಗಿ, ಚಿತಾಗಾರದಲ್ಲೂ ಮೃತರ ಕುಟುಂಬಸ್ಥರು ಹೆಣದ ಮುಂದೆ ಗಂಟೆಗಟ್ಟಲೆ ಕಾಯುವ ಅನಿವಾರ್ಯತೆ ಎದುರಾಗಿದೆ.

ABOUT THE AUTHOR

...view details