ಬೆಂಗಳೂರು:ಸಚಿವರು ಇರುತ್ತಾರಾ, ಬದಲಾಗುತ್ತಾರಾ? ಎಂದು ಆಡಳಿತ ಪಕ್ಷದ ಶಾಸಕ ಅಪ್ಪಚ್ಚು ರಂಜನ್ ಅವರು ಮುಜುಗರ ಆಗುವಂತೆ ಪ್ರಶ್ನಿಸಿದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.
ಕಾವೇರಿ ನದಿ ಕಲುಷಿತ ಆಗುತ್ತಿರುವ ವಿಚಾರದ ಬಗ್ಗೆ ಪರಿಸರ ಖಾತೆ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಪ್ರಶ್ನೆ ಕೇಳಿದರು. ಆದರೆ ಈ ಪ್ರಶ್ನೆಗೆ ಸಚಿವರು, ಬೇರೆಯದೇ ಉತ್ತರ ಒದಗಿಸಿದ್ದಾರೆ. ಕೊಟ್ಟ ಉತ್ತರಕ್ಕೆ ಸಚಿವರ ಸಹಿಯೂ ಇರಲಿಲ್ಲ ಎಂದು ಹೇಳಿದರು. ಇದರಿಂದ ಸಿಟ್ಟಾದ ಅಪ್ಪಚ್ವು ರಂಜನ್, ನನಗೆ ಉತ್ತರ ಬದಲಾಯಿಸಿ ಕೊಟ್ಟಿದ್ದಾರೆ. ಈ ಉತ್ತರದಲ್ಲಿ ಸಚಿವರ ಸಹಿಯೂ ಇಲ್ಲ. ಈ ಉತ್ತರವನ್ನು ನಾನು ಒಪ್ಪಬೇಕಾ?. ಸ್ಪೀಕರ್ ಅವರೇ ನೀವೇ ಹೇಳಿ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಸರ್ಕಾರವನ್ನೇ ಕೆಣಕಿದರು.