ಕರ್ನಾಟಕ

karnataka

ETV Bharat / state

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡೋ ಗ್ಯಾಂಗ್​​ ಮೇಲೆ ಕಣ್ಣಿಟ್ಟ ಸಿಸಿಬಿ.. - ಪ್ರಶ್ನೆ ಪತ್ರಿಕೆಗಳು ಸೋರಿಕೆ,

ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನ ಸೋರಿಕೆ ಮಾಡುವ ಗ್ಯಾಂಗ್​ ಮೇಲೆ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದು, ಯಾವುದೇ ತೊಂದರೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

CCB police, ಸಿಸಿಬಿ ಪೊಲೀಸ್

By

Published : Nov 17, 2019, 4:38 PM IST

ಬೆಂಗಳೂರು:ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆ ಮಾಡುವ ಗ್ಯಾಂಗ್​ ಮೇಲೆ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದು, ಯಾವುದೇ ತೊಂದರೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಇಂದು ಪೊಲೀಸ್ ಪೇದೆ ಪರೀಕ್ಷೆಯಿದ್ದು, ಮುಂಬರುವ ಪಿಎಸ್​ಐ ಪರಿಕ್ಷೇಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿಸಿಬಿ ಪೊಲೀಸರು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿ ಬಸವರಾಜ್​ ಹಾಗೂ ಆತನ ಸಹಚರರಿಗೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಪಿಎಸ್​ಐ ಹಾಗೂ ಪೊಲೀಸ್ ಪೇದೆ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿ ಬಸವರಾಜ ಹಾಗೂ ಶಿವಕುಮಾರ್​ ಗ್ಯಾಂಗ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದರು. ಹಾಗಾಗಿ ಈಗ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ಸಿಸಿಬಿ ಎಲ್ಲಾ ಆರೋಪಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ. ಕಾನೂನು ಪರಿದಿಯನ್ನು ಬಿಟ್ಟು ಹೋಗೋ ಆರೋಪಿಗಳ ಚಲನವಲನದ ಬಗ್ಗೆಯೂ ಪೊಲೀಸರು‌ ನಿಗಾ ವಹಿಸಿದ್ದಾರೆ.

ABOUT THE AUTHOR

...view details