ಕರ್ನಾಟಕ

karnataka

ETV Bharat / state

ಜನರಿಗೆ ಕೊರೊನಾ ಮೇಲೆ ಭಯ, ಮಟನ್-ಚಿಕನ್ ಮೇಲೆ ಆಸೆ - ಮಟನ್, ಚಿಕನ್ ಸ್ಟಾಲ್‌ಗಳ ಎದುರು ಕ್ಯೂ ‌ಹೊಸದೊಡಕಿಗೆ ರೆಡಿಯಾದ ಜನ

ಕೊರೊನಾ ಭಯದ ನಡುವೆಯೂ ಸಿಲಿಕಾನ್ ಸಿಟಿ ಜನರು ಮುಂಜಾನೆಯಿಂದಲೇ ಮಟನ್, ಚಿಕನ್ ಅಂಗಡಿಗಳ ಎದುರು ಸರತಿ ಸಾಲಲ್ಲಿ ನಿಂತು ಮಾಂಸ ಖರೀದಿಸೋಕೆ ಮುಂದಾಗಿದ್ದಾರೆ.

Que infront of the chicken shop in Bangalore
ಮಟನ್, ಚಿಕನ್ ಸ್ಟಾಲ್‌ಗಳ ಎದುರು ಕ್ಯೂ ‌ಹೊಸದೊಡಕಿಗೆ ರೆಡಿಯಾದ ಜನ

By

Published : Mar 26, 2020, 9:58 AM IST

ಬೆಂಗಳೂರು :ರಾಜ್ಯದಲ್ಲಿ ಕೊರೊನಾ ವೈರಸ್ ಭಯದ ನಡುವೆ ಹಕ್ಕಿ ಜ್ವರದ ಭೀತಿಯೂ ಎದುರಾಗಿದೆ. ಆದ್ರೂ ಕೂಡಾ ಜನ ಮಾತ್ರ ಯಾವುದಕ್ಕೂ ಕ್ಯಾರೆನ್ನುಲ್ಲಿಲ್ಲ. ಯುಗಾದಿಯ ನಂತರದ ಹೊಸತೊಡಕು(ಮಾಂಸದೂಟ) ಆಚರಣೆಗೆ ಮಾಂಸ ಖರೀದಿಗಾಗಿ ಮಾಂಸದಂಗಡಿಗಳ ಮುಂದೆ ಸರತಿಯಲ್ಲಿ ನಿಂತಿದ್ದಾರೆ.

ನಗರದಲ್ಲಿ ಯುಗಾದಿ ಹಬ್ಬದ ಹೊಸತೊಡಕಿಗೆ ಮಾಂಸದಂಗಡಿಗಳನ್ನು ತೆರೆಯಲಾಗಿದೆ. ಮುಂಜಾನೆಯೇ ಮಟನ್, ಚಿಕನ್ ಸ್ಟಾಲ್‌ಗಳೆದುರು ಜನರು ಕ್ಯೂ‌ ನಿಂತಿದ್ದ ದೃಶ್ಯ ಕಂಡುಬಂತು.

ಮಟನ್, ಚಿಕನ್ ಸ್ಟಾಲ್‌ಗಳ ಎದುರು ಜನರ ಕ್ಯೂ

ಮತ್ತೊಂದೆಡೆ ಪೊಲೀಸರು ಜನರನ್ನು ಗುಂಪುಗೂಡಲು ಬಿಡದೆ ಒಂದೊಂದು ಮೀಟರ್​ ಅಂತರದಲ್ಲಿ ಸೂಚಿಸಲಾದ ಬಾಕ್ಸ್‌ನಲ್ಲಿ ನಿಲ್ಲಿಸಿ ಖರೀದಿಗೆ ಅನುವು ಮಾಡಿ ಕೊಡುತ್ತಿದ್ದಾರೆ.

ಜೊತೆಗೆ ಜನರಿಗೆ ಮುಖಕ್ಕೆ ಮಾಸ್ಕ್ ಧರಿಸುವಂತೆ ತಿಳಿ ಹೇಳುತ್ತಿದ್ದಾರೆ.

ABOUT THE AUTHOR

...view details