ಕರ್ನಾಟಕ

karnataka

ETV Bharat / state

ಪ್ರಚಾರಕ್ಕಾಗಿ ಬೀದಿ ಜಗಳ: ಕೈ​ ಕಾರ್ಯಕರ್ತರಿಬ್ಬರ ರಂಪಾಟ - undefined

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸಭೆ ಬಳಿಕ ದಿನೇಶ್​ ಗುಂಡೂರಾವ್ ಮಾಧ್ಯಮದವರೊಂದಿಗೆ ಸಭೆ ನಡೆಸಿ ಮುಖ್ಯಾಂಶಗಳನ್ನು ವಿವರಿಸಿದ್ದಾರೆ. ಅವರ ಜತೆ ಕಾಣಿಸಿಕೊಳ್ಳಬೇಕು ಎಂಬ ಹಂಬಲದಿಂದ ಇಬ್ಬರು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ಕಾಂಗ್ರೆಸ್​ ನಾಯಕರ ಜತೆ ಕಾಣಿಸಿಕೊಳ್ಳಲು ಬೀದಿ ಜಗಳಕ್ಕೆ ನಿಂತ ಕಾರ್ಯಕರ್ತರು

By

Published : Jul 24, 2019, 4:57 PM IST

ಬೆಂಗಳೂರು: ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆ ಮುಗಿಸಿ ಮಾಧ್ಯಮದವರೊಂದಿಗೆ ಮಾತನಾಡಲು ಬಂದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ಜತೆ ಕಾಣಿಸಿಕೊಳ್ಳಬೇಕೆಂಬ ತವಕದಿಂದ ಕೈ ಕಾರ್ಯಕರ್ತರು ಜಗಳವಾಡಿಕೊಂಡ ಘಟನೆ ಬುಧವಾರ ನಡೆದಿದೆ.

ಹಿರಿಯ ನಾಯಕರ ಜತೆ ಕಾಣಿಸಿಕೊಳ್ಳಲು ಬೀದಿ ಜಗಳಕ್ಕೆ ನಿಂತ ಕೈ ಪಕ್ಷದ ಕಾರ್ಯಕರ್ತರು

ಈ ವಿಷಯವಾಗಿ ಬಿರುಸಿನ ಮಾತಿನ ಚಕಮಕಿ ನಡೆಯಿತು. ಪ್ರತಿ ಭಾರಿಯು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದೀರಾ. ನಮಗೂ ಅವಕಾಶ ಕೊಡಿ ಎಂದು ಕಾರ್ಯಕರ್ತರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಸಭೆಯ ವಿವರವನ್ನು ಮಾಧ್ಯಮದರಿಗೆ ತಿಳಿಸಿ ದಿನೇಶ್​ ಗುಂಡೂರಾವ್​ ಅಲ್ಲಿಂದ ಹೊರಡುತ್ತಿದ್ದಂತೆ, ಇತ್ತ ಕಾರ್ಯಕರ್ತರ ಮುನಿಸು ಹೆಚ್ಚಾಗಿದೆ. ಪ್ರತಿ ಭಾರಿಯು ನೀನೇ ಕಾಣಿಸಿಕೊಳ್ಳಬೇಕು ಎಂದರೆ ನಿನ್ನದೇ ಚಾನಲ್​ವೊಂದನ್ನು ಪ್ರಾರಂಭಿಸು ಎಂದು ಪರಸ್ಪರ ಕಾರ್ಯಕರ್ತರು ರೇಗಿದ್ದಾರೆ.

For All Latest Updates

TAGGED:

ABOUT THE AUTHOR

...view details