ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ: ಮತ್ತೋರ್ವನ ಸ್ಥಿತಿ ಗಂಭೀರ - ಕ್ಷುಲಕ್ಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದ್ದು, ಮೊತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

bengaluru
ಸಯ್ಯದ್ ವಸೀಂ ಅಲಿಯಾಸ್ ಬೊಡ್ಕ ವಸೀಂ

By

Published : Mar 27, 2021, 11:00 PM IST

ಬೆಂಗಳೂರು: ಸಿಗರೇಟ್ ವಿಚಾರದಲ್ಲಿ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ನಗರದ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಂಡನ ಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.

ಸಯ್ಯದ್ ವಸೀಂ ಅಲಿಯಾಸ್ ಬೊಡ್ಕ ವಸೀಂ ಕೊಲೆಯಾದ ವ್ಯಕ್ತಿ. ಅಬ್ದುಲ್ ಅಲಿಯಾಸ್ ಡಿಂಗ್ ಡಿಂಗ್‌ ಗಾಯಗೊಂಡಿರುವ ವ್ಯಕ್ತಿ. ಅರ್ಬಾಜ್ ಖಾನ್ ಮತ್ತು ಸೈಫುಲ್ಲಾ ನಡುವೆ ಸಿಗರೇಟ್ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ವಿಚಾರವನ್ನು ಅರ್ಬಾಜ್ ಖಾನ್ ಬಂದು ತನ್ನ ಸ್ನೇಹಿತ ಅಬ್ದುಲ್ ಅಲಿಯಾಸ್ ಡಿಂಗ್ ಡಿಂಗ್‌ನಿಗೆ ತಿಳಿಸಿದ್ದ. ಅಬ್ದುಲ್ ತನ್ನ ಸ್ನೇಹಿತ ಜುಬೇರ್​​ನೊಂದಿಗೆ ಸಯ್ಯದ್ ವಸೀಂ ಅಲಿಯಾಸ್ ಬೋಡ್ಕ ವಸೀಂನ ಮನೆಯ ಬಳಿ ಬಂದು ಗಲಾಟೆಯ ವಿಚಾರ ತಿಳಿಸಿದ್ದಾನೆ. ನಂತರ ನಾಲ್ವರು ಸೈಫುಲ್ಲಾನನ್ನು ಕರೆದುಕೊಂಡು ಮಾತನ್ನಾಡುವುದಾಗಿ ಗಂಗೊಂಡನಹಳ್ಳಿಯ ಮದೀನಾ ಮಸೀದಿಯ ಬಳಿಗೆ ಕರೆದುಕೊಂಡು ಬಂದಿದ್ದರು.

ಸ್ಥಳದಿಂದ ಸೈಫುಲ್ಲಾನ ಅಣ್ಣ ಶೇಕ್ ಬರ್ಕತ್‌ಗೆ ಕರೆ ಮಾಡಿ ನಿನ್ನ ತಮ್ಮ ಅರ್ಬಾಜ್ ಜೊತೆ ಗಲಾಟೆ ಮಾಡಿಕೊಂಡಿಕೊಂಡಿದ್ದಾನೆ. ಈ ವಿಚಾರವಾಗಿ ಮಾತನಾಡಲು ಮದೀನಾ ಮಸೀದಿ ಬಳಿ ಬರವಂತೆ ಕರೆದಿದ್ದರು. ಮಾರಕಾಸ್ತ್ರಗಳೊಂದಿಗೆ ಸ್ಥಳಕ್ಕೆ ಬಂದ ಆರೋಪಿ ಶೇಕ್ ಬರ್ಕತ್ ಅಲಿಯಾಸ್ ಬಣ್ಣು ತನ್ನ ಐದು ಜನ ಸಹಚರರೊಂದಿಗೆ ಸೈಯ್ಯದ್ ವಸೀಂ ಅಲಿಯಾಸ್ ಬೋಡ್ತಾ ವಸೀಂ ಹಾಗೂ ಅಬ್ದುಲ್ ಇಬ್ಬರಿಗೆ ಮಾರಕಾಸ್ತ್ರಗಳಿಂದ ಥಳಿಸಿದ್ದಾರೆ.

ಪರಿಣಾಮ ಸೈಯದ್ ವಸೀಂ ಅಲಿಯಾಸ್ ಬೊಡ್ಕ ವಸೀಂ ಸ್ಥಳದಲ್ಲಿಯೇ ಸಾವನಪ್ಪಿದ್ದು, ಅಬ್ದುಲ್ ಅಲಿಯಾಸ್ ಡಿಂಗ್ ಡಿಂಗ್‌ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಅಬ್ದುಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಚಂದ್ರಾಲೇಔಟ್ ಪೊಲೀಸರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details