ಬೆಂಗಳೂರು: ಎಣ್ಣೆ ಏಟಿನಲ್ಲಿ ಎರಡು ಗುಂಪಿನ ಜನರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನ ಹೊಟೇಲ್ವೊಂದರಲ್ಲಿ ನಡೆದಿದೆ.
ಅನ್ನಪೂರ್ಣೇಶ್ವರಿ ನಗರದ ಮಾಳಗಾಲದ ದೊನ್ನೆ ಬಿರಿಯಾನಿ ಹೋಟೆಲ್ಗೆ ಬುಧವಾರ ರಾತ್ರಿ ಎರಡು ಗುಂಪಿನ ಸದಸ್ಯರು ಊಟಕ್ಕೆ ಬಂದಿದ್ದರು. ಈ ವೇಳೆ ವೈಟರ್ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಮಾತು ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಇದೇ ವೇಳೆ ಎರಡು ಗುಂಪಿನ ಸದಸ್ಯರು ಅಲ್ಲಿದ್ದ ಬಾಟಲ್, ಕುರ್ಚಿ, ಟೇಬಲ್ಗಳಿಂದ ಹೊಡೆದಾಡಿಕೊಂಡಿದ್ದಾರೆ.